ಇಳಕಲ್‌ದ ಜೇಸಿ ಶಾಲೆಯ ಹತ್ತಿರ ಇರುವ ಶರಣಬಸವೇಶ್ವರ ದೇವಸ್ಥಾನ ವತಿಯಿಂದ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರದಂದು ಕುಂಭ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ದೇವಸ್ಥಾನದಿಂದ ಆರಂಭವಾದ ಕುಂಭ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಭಗಳನ್ನು ಹೊತ್ತುಕೊಂಡು ಉರಿಯುವ ಬಿಸಿಲಿನ ತಾಪದಲ್ಲಿಯೇ ಸಾಗಿದ್ದರು.
ಮೆರವಣಿಗೆ ನಾರಾಯಣ ಚಿತ್ರಮಂದಿರ, ಮಾಗಿ ಮೆಡಿಕಲ್, ಪೋಲಿಸ್ ಬಯಲು, ಅಂಬಾಭವಾನಿ ದೇವಸ್ಥಾನ, ಕೊಪ್ಪರದಪೇಟೆ, ಶ್ರೀರಾಮ ಮಂದಿರ, ತರಕಾರಿ ಮಾರುಕಟ್ಟೆ, ಗಾಂಧಿ ಚೌಕ, ಕಂಠಿ ಸರ್ಕಲ್, ನಗರಸಭೆ ಕಾರ್ಯಾಲಯ, ಸಜ್ಜನ ಶಾಲೆ ಮಾರ್ಗವಾಗಿ ಮರಳಿ ಶರಣಬಸವೇಶ್ವರ ದೇವಸ್ಥಾನ ತಲುಪಿತು.
ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರ ಜೊತೆಗೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಹಾಂತಪ್ಪ ಹಾವರಗಿ, ಉಪಾಧ್ಯಕ್ಷ ಶಿವಪುತ್ರ ಮುಳಗುಂದ , ಸದಸ್ಯರಾದ ಅಮರೇಶ ವಂಕಲಕು0ಟಿ, ಉಮೇಶ್ ಶಿರೂರ, ಚಂದ್ರು ಎಕ್ಕೇಲಿ, ಅಶೋಕ ಶಿರೂರ, ಚೇತನ ಬೊಮ್ಮಸಾಗರ ಮಹಾಂತೇಶ ವಂಕಲಕು0ಟಿ ಅರ್ಚಕ ವಿರುಪಾಕ್ಷಯ್ಯ ಗೋನಾಳಮಠ ಸೇರಿದಂತೆ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.