ಮಳೆಯ ಅರ್ಭಟ ಮುಗಿಲು ಹರಿದ ಹಾಗೆ ಸುರಿದ ಮಳೆರಾಯ
ಇಳಕಲ್ : ಶನಿವಾರ ಬೆಳಿಗ್ಗೆ ೫-೨೦ ಕ್ಕೆ ಒಮ್ಮಿಂದೊಮ್ಮಲೇ ಆರಂಭವಾದ ಅಶ್ಲೇಷಾ ಮಳೆ ಮುಗಿಲು ಹರಿದ ಹಾಗೆ ಧೋ ಎಂದು ಸುರಿಯಿತು.
ಬೆಳಗಿನ ಜಾವದಲ್ಲಿಯೇ ಮಿಂಚು ಆಕಾಶದಲ್ಲಿ ಆಗಾಗ ಕಂಡು ಬರುತ್ತಿದ್ದರೂ ಅಂತಹ ಯಾವುದೇ ಮಳೆಯ ಸೂಚನೆ ಇದ್ದಿಲ್ಲ.
ಆದರೆ ನಂತರದಲ್ಲಿ ಮಳೆ ಒಮ್ಮಿಂದೊಮ್ಮಲೇ ಸುರಿಯಲು ಆರಂಭಿಸಿದಾಗ ಬಹುತೇಕ ಜನ ತಾವು ಮಲಗಿದ ಜಾಗೆಯಲ್ಲಿಯೇ
ತುಂಬಾ ಹೊತ್ತುಕೊಂಡು ಮಲಗಿದರು.ಸುಮಾರು ಒಂದೂವರೆ ಗಂಟೆಯ ಕಾಲ ಸುರಿದ ಮಳೆ
ಕಳೆದೆರಡು ದಿನಗಳಿಂದ ತುಂಬಿದ್ದ ಸೆಖೆಯನ್ನು ಹೋಗಲಾಡಿಸಿತು.
ಇದರಿಂದಾಗಿ ದಿನಪತ್ರಿಕೆಗಳನ್ನು ವಿತರಿಸುವ ಕಾರ್ಯದಲ್ಲಿ ಅಡಚಣೆ ಉಂಟಾಗಿ ಓದುಗರಿಗೆ
ಪತ್ರಿಕೆಗಳು ಸಕಾಲದಲ್ಲಿ ಮುಟ್ಟಲಿಲ್ಲ. ತರಕಾರಿ ಮಾರಾಟ ಮಾಡುವ ವ್ಯಾಪಾರಸ್ಥರು
ಸಹ ತೊಂದರೆಗೆ ಸಿಲುಕಿದರು. ಹಾಲಿನ ಪಾಕೀಟುಗಳ ವಿತರಣೆ ಸಹ ವಿಚಲಿತಗೊಂಡಿತು.