ಇಳಕಲ್ ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಮತದಾನ ಜಾಗೃತಿ ಜಾಥಾ
ಇಳಕಲ್ ತಾಲೂಕಾ ಆಡಳಿತ ಹಾಗೂ ನಗರಸಭೆ ಸಹಯೋಗದಲ್ಲಿ ತಾಲೂಕಿನ ಅಂಗನವಾಡಿ, ಆಶಾ , ಲಿಂಗತ್ವ ಅಲ್ಪ ಸಂಖ್ಯಾತರು ಮತ್ತು ಸ್ತ್ರಿ ಶಕ್ತಿ ಸಂಘದ ಸದಸ್ಯರು ಸೋಮವಾರದಂದು ನಗರದ ಪ್ರಮುಖ ಬೀದಿಗಳಲ್ಲಿ ಮತದಾನ ಜಾಗೃತಿ ಮೆರವಣಿಗೆಯನ್ನು ನಡೆಸಿದರು.
ನಗರಸಭೆ ಕಾರ್ಯಾಲಯದ ಮುಂದೆ ಅಭಿಯಾನಕ್ಕೆ ತಹಸೀಲ್ದಾರ ಸತೀಶ್ ಕೂಡಲಗಿ , ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಮುರಳಿಧರ ದೇಶಪಾಂಡೆ ಪೌರಾಯುಕ್ತ ರಾಜಾರಾಮ ಪವಾರ ಚಾಲನೆ ನೀಡಿದ ನಂತರ ಎಲ್ಲರೂ ಸಾಲು ಸಾಲಾಗಿ ಘೋಷಣಾ ಫಲಕಗಳನ್ನು ಹಿಡಿದುಕೊಂಡು ಮತದಾನ ಮಾಡಲು ಜನತೆಯಲ್ಲಿ ಜಾಗೃತಿ ಮೂಡಿಸಿದರು.
ನಗರಸಭೆ ಕಾರ್ಯಾಲಯದಿಂದ ಕಂಠಿ ಸರ್ಕಲ್, ಸೆಂಟ್ರಲ್ ಸ್ಕೂಲ್, ಗೊರಬಾಳ ನಾಕಾ ಮಾರ್ಗವಾಗಿ ಅಲಂಪೂರಪೇಟೆಯ ಭಾಗದಲ್ಲಿ ಸಂಚರಿಸಿ ಮರಳಿ ನಗರಸಭೆ ಕಾರ್ಯಾಲಯಕ್ಕೆ ಆಗಮಿಸಿತು.