ILKALHemaraddy Mallama Souharda Bank ಹೇಮರಡ್ಡಿ ಮಲ್ಲಮ ಸೌಹಾರ್ದ ಪತ್ತಿನ ಬ್ಯಾಂಕಿಗೆ ೭೫ ಲಕ್ಷ ೯೭ಸಾವಿರ ಲಾಭ: ಸಂಘದ ಅಧ್ಯಕ್ಷ ಎಂ.ಆರ್ ಪಾಟೀಲ
ಇಳಕಲ್ : ಇಲ್ಲಿನ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಸಂಘದ ೧೫ ನೇ ವಾರ್ಷಿಕ ಸರ್ವಸಾಧಾರಣಾ ಸಭೆ ಶನಿವಾರದಂದು ನಡೆಯಿತು ಕಳೆದ ಸಾಲಿನಲ್ಲಿ ೭೫ ಲಕ್ಷ ೯೭ಸಾವಿರ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಆರ್.ಪಾಟೀಲ ಹೇಳಿದರು.
೨೦೦೯-೧೦ ರಲ್ಲಿ ಪ್ರಾರಂಭಗೊAಡ ಸಂದರ್ಭದಲ್ಲಿ ೧೧೧೧ ಶೇರುದಾರರು ಇದ್ದು ಪ್ರಸಕ್ತ ವರ್ಷ ೨೦೨೩-೨೪ ನೇ ಸಾಲಿನಲ್ಲಿ ೩೪೪೬ ಸದಸ್ಯರನ್ನೊಂದಿದೆ. ಒಟ್ಟು ಶೇರು ಬಂಡವಾಳ ೧ ಕೋಟಿ ೮೭ಲಕ್ಷ, ಠೇವಣಿ ೪೨ ಕೋಟಿ ೭೨ಲಕ್ಷ, ಕೊಟ್ಟಿರುವ ಸಾಲ ೨೧ ಕೋಟಿ ೮೮ಲಕ್ಷ, ದುಡಿಯುವ ಬಂಡವಾಳ ೪೯ ಕೋಟಿ ೫ಲಕ್ಷ ಆಗಿದೆ ಎಂದು ಹೇಳಿದರು.
ಸದರಿ ವರ್ಷದಲ್ಲಿ ಶೇ. ೧೩ ರಷ್ಟು ಸದಸ್ಯರ ಶೇರು ಹಣದ ಮೇಲೆ ಡಿವಿಡೆಂಟ್ ಹಂಚಲಾಗುವದು ಸಂಸ್ಥೆ ೩ ಶಾಖೆಗಳನ್ನು ಹೊಂದಿದ್ದು ಸಂಸ್ಥೆಯ ಪ್ರಗತಿಗೆ ಗ್ರಾಹಕರೇ ಮುಖ್ಯ ಕಾರಣ ಎಂದು ಹೇಳಿದರು.
ಸಂಸ್ಥೆಯ ಸದಸ್ಯರ ಮಕ್ಕಳು ಪ್ರಸಕ್ತ ವರ್ಷದ ವ್ಯಾಸಂಗದಲ್ಲಿ ಹೆಚ್ಚಿನ ಅಂಕಗಳಿಸಿದವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಉಪಾಧ್ಯಕ್ಷ ವಸಂತ ಗುಡೂರ ಹೇಳಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ ನಾಗರತ್ನ ಪಾಟೀಲ ೨೦೨೩-೨೪ನೇ ಸಾಲಿನ ೧೫ನೇ ವಾರ್ಷಿಕ ವರದಿ ಹಾಗೂ ಅಢಾವೇ ಪತ್ರಿಕೆ ಓದಿದರು. ಸಂಘದ ನಿರ್ದೇಶಕರಾದ ಬಸವರಾಜ ನಾಡಗೌಡರ, ಅರವಿಂದ ಗೌಡರ, ಸುಮಾ ಮಾಕಾಪುರ, ಹೇಮಂತ ಛಲವಾದಿ, ಕಂಟೇಪ್ಪ ಲಕ್ಕುಂಡಿ, ಕಾವೇರಿ ಕವಡಿಮಟ್ಟಿ, ರಮೇಶ ತಳವಾರ, ಮಲ್ಲನಗೌಡ ಗೌಡರ, ಬಸವರಾಜ ಪಾಟೀಲ, ಅಶೋಕ ಕಂದಕೂರ, ದೇವರಡ್ದೆಪ್ಪ ನಾಗರಾಳ ನಿಂಗನಗೌಡ ಪಾಟೀಲ, ಸಂತೋಷ್ ಬಂಡರಗಲ್ಲ ಪೂರ್ಣಿಮಾ ಚಳಗೇರಿ ಶಶಿಕುಮಾರ ಗುಗಿಹಾಳ ಉಪಸ್ಥಿತರಿದ್ದರು. ವ್ಯವಸ್ಥಾಪಕ ಉಮೇಶ ಗೌಡರ ನಿರೂಪಿಸಿ ವಂದಿಸಿದರು.
ವರದಿ : ಭೀಮಣ್ಣ ಗಾಣಿಗೇರ(ಇಳಕಲ್ಲ)