Implementation of 07th Pay Commission Report-Ilakal Employees Sangh Harsha 07 ನೇ ವೇತನ ಆಯೋಗದ ವರದಿ ಯಥಾವತ್ತು ಜಾರಿ-ಇಳಕಲ್ ನೌಕರರ ಸಂಘ ಹರ್ಷ

WhatsApp Group Join Now
Telegram Group Join Now
Instagram Group Join Now
Spread the love

Implementation of 07th Pay Commission Report-Ilakal Employees Sangh Harsha 07 ನೇ ವೇತನ ಆಯೋಗದ ವರದಿ ಯಥಾವತ್ತು ಜಾರಿ-ಇಳಕಲ್ ನೌಕರರ ಸಂಘ ಹರ್ಷ

 

 

07 ನೇ ವೇತನ ಆಯೋಗದ ವರದಿ ಯಥಾವತ್ತು ಜಾರಿ-ಇಳಕಲ್ ನೌಕರರ ಸಂಘ ಹರ್ಷ

 

ರಾಜ್ಯ ಸರಕಾರಿ ನೌಕರರ ಬಹುದಿನಗಳ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ೦೭ ನೇ ವೇತನ ಆಯೋಗದ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ವಿಧಾನ ಮಂಡಲ ಅಧಿವೇಶನದಲ್ಲಿ ಯಥಾವತ್ತಾಗಿ ಜಾರಿ ಮಾಡಿದ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸದಸ್ಯರ ತೀರ್ಮಾನಕ್ಕೆ ಇಳಕಲ್ ನೌಕರರ ತಾಲೂಕು ಘಟಕ ಹರ್ಷ ವ್ಯಕ್ತಪಡಿಸಿದೆ.

ಈ ಕುರಿತು ಇಳಕಲ್ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಶುರಾಮ ಪಮ್ಮಾರ ಮಾತನಾಡಿ,ಸಂಘದ ನಿರಂತರ ಹೋರಾಟದ ಪ್ರತಿಫಲವಾಗಿ ಹಾಗೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಿದ್ದ ನೌಕರರ ಮಹಾಸಮ್ಮೇಳನದಲ್ಲಿ ಕೊಟ್ಟ ಮಾತಿನಂತೆ ೦೭ ನೇ ವೇತನ ಆಯೋಗದ ವರದಿಗೆ ಘನ ಸರಕಾರವು ಅಸ್ತು ಎಂದಿದೆ.ಇದರಿAದ ರಾಜ್ಯದ ೬ ಲಕ್ಷ ಸರಕಾರಿ ನೌಕರರು,ನಿವೃತ್ತ ನೌಕರರು,ನಿಗಮ ಮಂಡಳಿ,ಸ್ಥಳೀಯ ಸಂಸ್ಥೆ ನೌಕರರು ಸೇರಿದಂತೆ ೧೦ ಲಕ್ಷಕ್ಕೂ ಅಧಿಕ ನೌಕರರ ವೇತನ ಹೆಚ್ಚಳ ಮಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ,ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ರವರಿಗೆ,ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಹಾಗೂ ಕಳೆದ ಜನೇವರಿ ಹಾಗೂ ಮೊನ್ನೆ ತಾಲೂಕಿನಲ್ಲಿ ಹಕ್ಕೊತ್ತಾಯ ಮನವಿ ಸ್ವೀಕರಿಸಿ,

ಮುಖ್ಯಮಂತ್ರಿಗಳಿಗೆ ನಮ್ಮ ಪರವಾಗಿ ಒತ್ತಾಯ ಮಾಡಿದ ಹುನಗುಂದ ಕ್ಷೇತ್ರದ ಮಾನ್ಯ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ರವರಿಗೆ, ಸಂಪುಟದ ಎಲ್ಲಾ ಸಚಿವರುಗಳಿಗೆ,ರಾಜ್ಯದ ಸರ್ವ ಶಾಸಕರುಗಳಿಗೆ,ಉನ್ನತ ಮಟ್ಟದ ಅಧಿಕಾರಿಗಳಿಗೆ ಹಾಗೂ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಹಾಗೂ ಜಿಲ್ಲಾಧ್ಯಕ್ಷರಾದ ಎಂ ಬಿ ಬಳ್ಳಾರಿ ರವರಿಗೆ ಇಳಕಲ್ ತಾಲೂಕಿನ ಸಮಸ್ತ ನೌಕರರು,ವೃಂದ ಸಂಘದ ಪದಾಧಿಕಾರಿಗಳು,ನೌಕರರ ಸಂಘದ ಪದಾಧಿಕಾರಿಗಳ ಪರವಾಗಿ ಧನ್ಯವಾದಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲದಾರರಾದ ಈಶ್ವರ ಗಡ್ಡಿ,ಕಾರ್ಯದರ್ಶಿ ಗುಂಡಪ್ಪ ಕುರಿ,ಖಜಾಂಚಿ ಶರಣು ಕೊಣ್ಣೂರ,ಗೌರವಾಧ್ಯಕ್ಷ ಎಸ್ ಎನ್ ಗಡೇದ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Leave a Comment

error: Content is protected !!