ಇಳಕಲ್ ನಗರದಲ್ಲಿ ಗದ್ದಿಗೌಡರ ಪರ ಬಿಜೆಪಿ ಭರ್ಜರಿ ಮತಭೇಟೆ
ಬಾಗಲಕೋಟ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಇಲಕಲ್ಲ ಬಿಜೆಪಿ ನಗರ ಮಂಡಲದ ವತಿಯಿಂದ ನಗರದ ಡಿವ್ಹಜನ್ ನಂ ೧೧ ರಲ್ಲಿ, ಶ್ರೀ ಬಸವಣ್ಣ ದೇವರ ಆಶೀರ್ವಾದ ದೊಂದಿಗೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಪುತ್ರ ರಾಜುಗೌಡ್ರು ಪಾಟೀಲರ ಹಾಗೂ ಇಳಕಲ್ ನಗರದ ಘಟಕದ ಅಧ್ಯಕ್ಷ ಅರವಿಂದ ಮಂಗಳೂರ ಮನೆ ಮನೆಗೆ ತೆರಳಿ ಭರ್ಜರಿ ಮತಭೇಟೆಯನ್ನು ನಡೆಸಿದ್ದಾರೆ.
ಕೇಂದ್ರ ಸರಕಾರ ಮಾಡಿದ ಅಭಿವೃದ್ಧಿ ಮತ್ತು ಸಾಧನೆಗಳ ಕರಪತ್ರಗಳನ್ನು ಸಾರ್ವಜನಿಕರಿಗೆ ನೀಡುತ್ತಾ ಮತ್ತೊಮ್ಮೆ ಮೋದಿಯವರ ಸರಕಾರವನ್ನು ತನ್ನಿರಿ ದೇಶವನ್ನು ಅಭಿವೃದ್ಧಿಯತ್ತ ತರೋಣ ಎಂದು ಮತದಾರರಿಗೆ ಮತಬೇಟೆಯನ್ನು ನಡೆಸಿದ್ದಾರೆ.