Inauguration ಇಳಕಲ್ ನಗರದಲ್ಲಿ ಅ.೦೭ ರಂದು ಭಾವಸಾರ ಕ್ಷತ್ರೀಯ ಪತ್ತಿನ ಸಹಕಾರಿ ಸಂಘ ಉದ್ಘಾಟನೆ
ಇಳಕಲ್ : ಇಲ್ಲಿನ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಆರಂಭಿಸಲಾಗುವ ಭಾವಸಾರ ಕ್ಷತ್ರೀಯ ಪತ್ತಿನ ಸಹಕಾರಿ ಸಂಘದ ಉದ್ಘಾಟನೆ
ಆ ೭ ಬುಧವಾರದಂದು ಮುಂಜಾನೆ ೧೦ ಗಂಟೆಗೆ ಹಿಂಗುಲಾAಬಿಕಾ ದೇವಸ್ಥಾನದಲ್ಲಿ ನಡೆಯಲಿದೆ.
ಸಾನಿಧ್ಯವನ್ನು ಪಂಢರಪುರದ ಪ್ರಭಾಕರದಾದಾ ಬೋದಲೆ ಮಹಾರಾಜ ಅಧ್ಯಕ್ಷತೆಯನ್ನು ಪ್ರಲ್ಹಾದರಾವ ಮಹೀಂದ್ರಕರ ವಹಿಸಲಿದ್ದಾರೆ.
ಉದ್ಘಾಟನೆಯನ್ನು ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ದಿಲೀಪ್ ದೇವಗಿರಿಕರ ಮಾಡಲಿದ್ದಾರೆ.
ಶೇರು ಪತ್ರಗಳನ್ನು ಬಿ ಎನ್ ಪೋಲಿಸಪಾಟೀಲ ,ಠೇವು ಪತ್ರಗಳನ್ನು ಕೃಷ್ಣಾಜಿ ಮಹೇಂದ್ರಕರ ,
ಎಸ್ ಬಿ ಪಾಸಬುಕ್ ಗಳನ್ನು ನಾರಾಯಣರಾವ ಅಂಬೋರೆ ವಿತರಿಸಲಿದ್ದಾರೆ ನೂತನ ಆಡಳಿತ
ಮಂಡಳಿಯ ಪ್ರಮಾಣ ಇದೇ ಸಮಯದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಪ್ರಶಾಂತ ಹಂಚಾಟೆ ತಿಳಿಸಿದ್ದಾರೆ.