village administrative ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರಕ್ಕೆ : ಸರ್ಕಾರಿ ನೌಕರರ ಸಂಘ ಬೆಂಬಲ
ಇಳಕಲ್ಲ : ಗ್ರಾಮ ಆಡಳಿತ ಅಧಿಕಾರಿಗಳ ಸಂಘ ತಾಲೂಕು ಘಟಕ ವತಿಯಿಂದ ಎರಡನೇ ಹಂತದ ಅನಿರ್ದಿಷ್ಟಾವಧಿ
ಮುಷ್ಕರವು ತಹಶೀಲದಾರ ಕಚೇರಿ ಆವರಣದಲ್ಲಿ ನಡೆಯುತ್ತಿದ್ದು ಸದರಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ
ನೌಕರರ ಸಂಘ ಇಳಕಲ್ಲ ತಾಲ್ಲೂಕ ಶಾಖೆಯ ವತಿಯಿಂದ ಸಂಪೂರ್ಣ ಬೆಂಬಲವನ್ನು ಶುಕ್ರವಾರದಂದ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕ ಘಟಕ ಅಧ್ಯಕ್ಷ ಪರಶುರಾಮ ಪಮ್ಮಾರ ಮಾತನಾಡಿ ಗ್ರಾಮ
ಆಡಳಿತ ಅಧಿಕಾರಿಗಳದ್ದು ನ್ಯಾಯಯುತವಾದ ಬೇಡಿಕೆಗಳಾಗಿದ್ದು, ಸರ್ಕಾರವು ಮೂಲಭೂತ ಸೌಲಭ್ಯಗಳನ್ನು ನೀಡಿ
ಕಾಲಮಿತಿಯಲ್ಲಿ ಕಾರ್ಯ ತಗೆದುಕೊಳ್ಳುವುದು ಬಿಟ್ಟು ,ಒತ್ತಡ ಹಾಕಿ ಕಾರ್ಯ ಮಾಡಿಸಿಕೊಳ್ಳುತ್ತಿದ್ದಾರೆ ಇದರಿಂದ ಮಾನಸಿಕವಾಗಿ
ನೌಕರರ ಮೇಲೆ ಪರಿಣಾಮವಾಗುತ್ತಿದೆ ಕಾರಣ ಘನ ಸರ್ಕಾರ ಶೀಘ್ರವಾಗಿ ಎಲ್ಲಾ ೨೩ ಸಮಸ್ಯೆಗಳನ್ನು ಈಡೇರಿಸಿ, ಸಾರ್ವಜನಿಕ ಸೇವೆಗೆ
ಅನುವು ಮಾಡಿಕೊಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಈಶ್ವರ ಗಡ್ಡಿ,ಕಾರ್ಯದರ್ಶಿ ಎಸ್ ಜಿ ಬಂಗಾರಿ,ಗ್ರಾಮ ಆಡಳಿತ ಅಧಿಕಾರಿಗಳ ಸಂಘಧ
ಅಧ್ಯಕ್ಷ ಎನ್ ಎ ಬೋರಗಿ, ಪದಾಧಿಕಾರಿಗಳಾದ ಬಸವರಾಜ ರೇವಡಿ,ಶಿವಪುತ್ರಪ್ಪ ಕತ್ತಿ,ಚಂದ್ರಶೇಖರ ಹಳದೂರ, ಲಿಂಗರಾಜ ಲೆಕ್ಕದ,
ಮಹಾಂತೇಶ ಗೌಡರ,ಎಂ ಎಂ ಜಹಗೀರದಾರ, ಶ್ರೀಧರ ಜೋಗಿನ, ಮಹಾಂತೇಶ ಕಲ್ಮಠ ಹಾಗೂ ತಾಲೂಕಿನ ಸರ್ವ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)