ಸೇವೆಗೆ ಸನ್ನದ್ದವಾಗುತ್ತಿರುವ ಇಂದಿರಾ ಕ್ಯಾಂಟೀನ್
ಇಳಕಲ್ : ನಗರದ ಪೋಲಿಸ್ ಠಾಣೆಯ ಆವರಣದ ಹಳೆಯ ಪೋಲಿಸ್ ಠಾಣೆಯ ಕಟ್ಟಡದ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ
ಇಂದಿರಾ ಕ್ಯಾಂಟೀನ್ ಕಟ್ಟಡ ಮುಗಿಯುವ ಹಂತಕ್ಕೆ ಬಂದಿದೆ.
ಕೇವಲ ಹದಿನೈದು ದಿನಗಳ ಅವಧಿಯಲ್ಲಿಯೇ ಇಂದಿರಾ ಕ್ಯಾಂಟೀನ್ ಕಟ್ಟಡ ಒಂದು ಹಂತಕ್ಕೆ ಬಂದಿದ್ದು
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಮನಸ್ಸು
ಮಾಡಿದರೇ ಆಗಷ್ಟ್ ೧೫ ರ ಒಳಗಾಗಿಯೇ ಇದು ಸೇವೆಗೆ ಸನ್ನದ್ದವಾಗಲಿದೆ.
ಗುತ್ತಿಗೆದಾರರು ಅತ್ಯಂತ ಮುತುವರ್ಜಿಯಿಂದ ಈ ಕ್ಯಾಂಟೀನ್ ಕಟ್ಟಡ ನಿರ್ಮಾಣ ಮಾಡಿದ್ದು
ಅದು ಶೀಘ್ರದಲ್ಲೇ ಸಾರ್ವಜನಿಕರಿಗೆ ಉಪಹಾರಕ್ಕೆ ದೊರೆಯಲಿದೆ.