Jayashree Talwar ಬಡತನದಲ್ಲಿ ಅರಳಿದ ಹಳ್ಳಿ ಪ್ರತಿಭೆ ಜಯಶ್ರೀ ತಳವಾರ
ಇಳಕಲ್ : ತಂದೆ ಸರಕಾರಿ ಕಚೇರಿಯಲ್ಲಿ ಡಿ ದರ್ಜೆ ನೌಕರ ತಾಯಿ ಆಶಾ ಕಾರ್ಯಕರ್ತೆ ಹೀಗೆ ಬಡತನದಲ್ಲಿಯೇ
ಬೆಳೆದ ಯುವತಿಯೋರ್ವಳು ಎಂ ಎ ಪತ್ರಿಕೋದ್ಯಮ ವಿಷಯದಲ್ಲಿ ಒಂಬತ್ತು ಚಿನ್ನದ ಪದಕಗಳನ್ನು ಪಡೆದುಕೊಂಡು
ತಾಲೂಕು ಮತ್ತು ಜಿಲ್ಲೆಯ ಹೆಸರನ್ನು ಎತ್ತರಕ್ಕೆ ಏರಿಸಿದ್ದಾಳೆ.
ಇಂತಹ ಅತ್ಯುತ್ತಮ ಸಾಧನೆಯನ್ನು ತಾಲೂಕಿನ ಹಿರೇಕೊಡಗಲಿ ಗ್ರಾಮದ ಜಯಶ್ರೀ ಮಹಾಂತೇಶ ತಳವಾರ
ಮಾಡಿದ್ದು ತಾಲೂಕಿನಲ್ಲಿಯೇ ಮಾತ್ರವಲ್ಲದೇ ಇಡೀ ಜಿಲ್ಲೆಯಲ್ಲಿ ಗಮನ ಸೆಳೆದಿದ್ದಾಳೆ.
ಕರ್ನಾಟಕ ವಿಶ್ವವಿದ್ಯಾಲಯದ ೭೪ ನೇ ಘಟಿಕೋತ್ಸವದಲ್ಲಿ ಜಯಶ್ರೀ ಒಂಬತ್ತು ಚಿನ್ನದ ಪದಕ ಪಡೆದುಕೊಂಡಿದ್ದಾಳೆ.
ಹೀಗೆ ಸಾಧನೆ ಮಾಡಿದ ಜಯಶ್ರೀ ಯುವತಿಯ ತಂದೆ ಮಹಾಂತೇಶ ಡಿ ದರ್ಜೆ ನೌಕರರಾಗಿದ್ದು ತಾಯಿ ಮಂಜುಳಾ
ಆಶಾ ಕಾರ್ಯಕರ್ತೆ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಅಪರೂಪದ ಸಾಧನೆ ಮಾಡಿದ ಜಯಶ್ರೀ ಅವರಿಗೆ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ ಸತೀಶ್ ಕೂಡಲಗಿ
ಗ್ರೇಡ್ ಟು ತಹಸೀಲ್ದಾರ ಈಶ್ವರ ಗಡ್ಡಿ ಮತ್ತು ಕಚೇರಿಯ ಸಿಬ್ಬಂದಿ ಹೃದಯಸ್ಪರ್ಶಿಯಾಗಿ ಸತ್ಕರಸಿ ನಿಮ್ಮ
ಮುಂದಿನ ಜೀವನ ಬಂಗಾರದAತೆ ಹೊಳೆಯಲಿ ಎಂದು ಹಾರೈಸಿದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)