ಕೆ.ಅಣ್ಣಾಮಲೈ 2024ರ ಲೋಕಸಭಾ ಚುನಾವಣೆಗೆ ಕೊಯಿಮತ್ತೂರ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ.
ಮಾಜಿ ಐಪಿಎಸ್ ಅಧಿಕಾರಿ ಕರ್ನಾಟಕದ ಸಿಂಗಂ ಎನಿಸಿಕೊಂಡ ಕೆ.ಅಣ್ಣಾಮಲೈ , ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆಶೀರ್ವಾದ ಮತ್ತು ತಮಿಳುನಾಡಿನ ಜನರ ಪ್ರೀತಿ ಮತ್ತು ಬೆಂಬಲದೊಂದಿಗೆ, ಮುಂಬರುವ ಸಂಸದೀಯ ಚುನಾವಣೆಯಲ್ಲಿ ಕೊಯಮತ್ತೂರು ಸಂಸದೀಯ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಅವರ ಸಹೋದರ ಮತ್ತು ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ವಿ. ಪಿ. ದುರೈಸಾಮಿ, ಅತ್ತಿಗೆ ಮತ್ತು ಕೊಯಮತ್ತೂರು ದಕ್ಷಿಣದ ಶಾಸಕ ವನತಿ ಶ್ರೀನಿವಾಸನ್ ಮತ್ತು ಪಕ್ಷದ ಇತರ ನಾಯಕರು ಇದ್ದರು.
ಕೊಯಮತ್ತೂರು ಸಂಸದೀಯ ಕ್ಷೇತ್ರದ ಅಡಿಯಲ್ಲಿ ಬರುವ ಪ್ರದೇಶಗಳ ಸಮಗ್ರ ಅಭಿವೃದ್ಧಿ, ಜನರಿಗೆ ಹೆಚ್ಚು ಪ್ರಯೋಜನವಾಗುವ ಯೋಜನೆಗಳನ್ನು ತರುವುದು ಮತ್ತು ಕೊಯಮತ್ತೂರಿನ ಪರಿಸರವನ್ನು ಪುನಃಸ್ಥಾಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು.
ಅವರ ಸ್ವಯಂ ಘೋಷಿತ ಆಸ್ತಿ 1 ಕೋಟಿ 48 ಲಕ್ಷ ಅದರಲ್ಲಿ ಒಂದು ಕೋಟಿ ಹನ್ನೆರಡು ಲಕ್ಷ ಆಸ್ತಿಪಾಸ್ತಿಯಾಗಿದ್ದು 52 ಎಕರೆ ವ್ಯವಸಾಯದ ಭೂಮಿಯನ್ನು ಹೊಂದಿದ್ದು ಈ ಎಲ್ಲಾ ಆಸ್ತಿಯು ಕರೂರು ಜಿಲ್ಲೆಯ ತಮ್ಮ ಹಳ್ಳಿಯಲ್ಲಿ ಇದೆ ಎಂದು ಅವರು ಸ್ವಯಂ ಘೋಷಿಸಿಕೊಂಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಲು, ಕೊಯಮತ್ತೂರು ಸೇರಿದಂತೆ ತಮಿಳುನಾಡಿನ ಜನರು, ಯಾವುದೇ ಪಕ್ಷ ಲೆಕ್ಕಿಸದೆ, ನಮ್ಮ ಪ್ರಧಾನಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ ಎಂದರು.