Kanakadasa ಕನಕದಾಸರು ಭಕ್ತ ಶ್ರೇಷ್ಠರು : ತಹಸೀಲ್ದಾರ ಕೂಡಲಗಿ
ಇಳಕಲ್ : ಯಾವುದೇ ಕುಲ ಗೋತ್ರಗಳಿಗೆ ಗಂಟು ಬೀಳದ ಭಕ್ತ ಕನಕದಾಸರು ಈ ನಾಡು ಕಂಡ ಭಕ್ತ
ಶ್ರೇಷ್ಠರು ಎಂದು ತಹಸೀಲ್ದಾರ ಸತೀಶ ಕೂಡಲಗಿ ಹೇಳಿದರು.
ನಗರದ ತಹಸೀಲ್ದಾರ ಕಚೇರಿಯಲ್ಲಿ ನಡೆದ ಕನಕದಾಸರ ಜಯಂತಿಯನ್ನು ಸಮಾಜದ ಬಾಂಧವರು
ಮತ್ತು ಕಚೇರಿಯ ಸಿಬ್ಬಂದಿಗಳು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿ ಮಾತನಾಡಿದ
ಅವರು ಉಡುಪಿಯಲ್ಲಿ ಇರುವ ಕೃಷ್ಣ ದೇವಾಲಯದಲ್ಲಿ ಕನಕದಾಸರಿಗಾಗಿ ಕಿಡಕಿಯೊಡೆದು
ದರ್ಶನ ನೀಡಿದ್ದೇ ಅದಕ್ಕೆ ಸಾಕ್ಷಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಸಂಗಣ್ಣ ಓಲೇಕಾರ, ,ಸಿದ್ದಣ್ಣ ಘಂಟಿ ,ಶರಣಪ್ಪ ಇದ್ದಲಗಿ
ಮತ್ತು ಹಿರಿಯರು ಕಚೇರಿಯ ಸಿಬ್ಬಂದಿ ಗ್ರೇಡ್ ಟು ತಹಸೀಲ್ದಾರ ಈಶ್ವರ ಗಡ್ಡಿ
ಪ್ರಕಾಶ ವಜ್ಜಲ ನವೀನ ಪಾಟೀಲ ಮತ್ತಿತರರು ಭಾಗವಸಿದ್ದರು.