Kannada Rajyotsava ನಗರಸಭೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಇಳಕಲ್ಲ: ನಗರದ ನಗರಸಭೆ ಕಾರ್ಯಾಲಯದ ಎಸ್.ಆರ್.ಕಂಠಿ ಸಭಾಂಗಣದಲ್ಲಿ ಭುವನೇಶ್ವರಿ
ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಾಮನಿರ್ದೇಶಿತ ಸದಸ್ಯರಾದ ಯಲ್ಲಪ್ಪ ರಾಜಾಪೂರ, ಮಲ್ಲು ಮಡಿವಾಳರ,
ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಆರೋಗ್ಯ ನೀರಿಕ್ಷಕ ಮನೋಹರ ದೊಡ್ಡಮನಿ, ನದಾಫ್, ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.






