ಸಂಭ್ರಮದಿ0ದ ಜರುಗಿದ ಕರಡಿ ಬಸವೇಶ್ವರ ರಥೋತ್ಸವ
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಕರಡಿ ಗ್ರಾಮದ ಆರಾಧ್ಯ ದೈವ ಕರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿAದ ಸಾಯಂಕಾಲ ೫-೪೫ ಗಂಟೆಗೆ ಜರುಗಿತು.
ಮುಂಜಾನೆ ಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ ಅಭಿಷೇಕ ಜರುಗಿದವು. ಜಿಲ್ಲೆ ಮತ್ತು ಸುತ್ತಮುತ್ತಲಿನ ಗ್ರಾಮದ ಭಕ್ತರು ಕರಡಿ ಗ್ರಾಮಕ್ಕೆ ಆಗಮಿಸಿ ತಮ್ಮ ಹರಕೆಗಳನ್ನು ತೀರಿಸಿ ಆಶೀರ್ವಾದವನ್ನು ಪಡೆದುಕೊಂಡರು.
ಸಾಯಂಕಾಲ ೫-೪೫ ಗಂಟೆಗೆ ರಥೋತ್ಸವ ಭಕ್ತರ ಜಯ ಘೋಷಣೆಗಳ ಮಧ್ಯ ವಿಜೃಂಭನೆಯಿAದ ಜರುಗಿತು.
ಬಸವೇಶ್ವರ ದೇವಸ್ಥಾನಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ, ಎಸ್.ಆರ್.ಎನ್.ಇ.ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಭೇಟಿ ನೀಡಿ ಆಶೀರ್ವಾದವನ್ನು ಪಡೆದುಕೊಂಡು ರಥೋತ್ಸವಕ್ಕೆ ಸಾಕ್ಷಿಯಾದರು.