Karadi Unfinished bridge work ಮುಗಿಯದ ಸೇತುವೆ ಕಾಮಗಾರಿ : ಹಳ್ಳ ದಾಟಲು ಹರಸಾಹಸ ಪಡುತ್ತಿರುವ ಮಕ್ಕಳು
ಬಾಗಲಕೋಟ : ಜಿಲ್ಲೆಯ ಇಳಕಲ್ ತಾಲೂಕಿನ ಕರಡಿ ಗ್ರಾಮದ ಸೇತುವೆ ಕಾಮಗಾರಿ ಮದಗತ್ತಿಯಲ್ಲಿ ಸಾಗುತ್ತಿದ್ದರಿಂದ ದಿನನಿತ್ಯ
ಸಂಚರಿಸುವ ಶಾಲಾ ಮಕ್ಕಳಿಗೆ ಮತ್ತು ವಾಹನ ಸವಾರರು ಹಳ್ಳ ದಾಟಲು ದಿನನಿತ್ಯ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ದಿನನಿತ್ಯ ವಯೋವೃದ್ಧರು ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ ಈ ಮಾರ್ಗದಲ್ಲಿ ಹೋಗಬೇಕು ಅವರ ಜೀವವನ್ನು
ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡಬೇಕಾಗಿದೆ.
ಇನ್ನೂ ಮಳೆ ಬಂದರೆ ಸಾಕು ಹಳ್ಳತುಂಬಿ ಹರಿಯುತ್ತದೆ. ಸೇತುವೆಯ ಕೆಲಸ ಯಾವಾಗ ಮುಗಿಯುತ್ತೋ
ಎಂಬ ಚಿಂತೆಯಲ್ಲಿ ಗ್ರಾಮಸ್ಥರು ಇದ್ದಾರೆ.
ಸಂಬAಧಪಟ್ಟ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಕಾಮಗಾರಿಯನ್ನು ಬೇಗನೆ ಮುಗಿಸಿ
ಗ್ರಾಮಸ್ಥರಿಗೆ ಅನೂಕೂಲ ಮಾಡಿಕೊಡುತ್ತಾರೆನೋ ಕಾದು ನೋಡಬೇಕಾಗಿದೆ.
* ಈ ಹಳ್ಳ ದಾಟಬೇಕಾಗದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ – ಮಲ್ಲಪ್ಪ ವಯೋವೃದ್ಧ ಗ್ರಾಮಸ್ಥ.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)