ಅಮೀನಗಡ ಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನ ಆಚರಣೆ
ಬಾಗಲಕೋಟ ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಭಾರತ ಮಾತೆಯ ಭಾವಚಿತ್ರಕ್ಕೆ
ಪುಷ್ಪ ನಮನ ಸಲ್ಲಿಸುವ ಮೂಲಕ ಜುಲೈ ೨೬ ಶುಕ್ರವಾರ ಮುಂಜಾನೆ ೧೧ ಗಂಟೆಗೆ ಆಚರಿಸಲಾಯಿತು.
ಯುವಾಬ್ರಿಗೇಡ್ ಹಾಗೂ ಶ್ರೀರಾಮಯ್ಯ ಸ್ವಾಮಿ ವಿಧ್ಯಾ ಸಂಸ್ಥೆಯ ವಿಧ್ಯಾರ್ಥಿಗಳು ಹಾಗೂ ಊರಿನ
ಎಲ್ಲ ತರಣರು ಸೇರಿ ಊರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ
ಕೆಚ್ಚೆದೆಯ ವೀರ ಯೋಧರಿಗೆ ಶತಕೋಟಿ ಪ್ರಣಾಮಗಳು ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಮೀನಗಡ ಠಾಣೆಯ ಪಿಎಸ್‌ಐ ಶಿವಾನಂದ ಸಿಂಗನ್ನವರವರು ಪಾಲ್ಗೊಂಡು ಮಾತನಾಡಿ
ಯುವಕರಿಗೆ ದೇಶಭಕ್ತಿಯ ಬಗ್ಗೆ ಕುರಿತು ಮಾತನಾಡಿರು.
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಅಮೀನಗಡ ಪಟ್ಟಣದ ಹೆಮ್ಮೆಯ ವೀರ ಯೋಧ ಷಣ್ಮುಖಪ್ಪ ಮಡಿವಾಳರವರು,
ಹಾಗೂ ಉರಿನ ವಿವಿಧ ಗಣ್ಯರು ಯುವಕರು ಸಾರ್ವಜನಿಕರು ಸೇರಿ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)