ಅಕ್ಕ ಪಕ್ಕದಲ್ಲಿನ ಜಾಗೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ : ತಾಲೂಕಾ ಆರೋಗ್ಯ ಅಧಿಕಾರಿ ಸಂಗಮೇಶ ಅಂಗಡಿ
ಹುನಗುಂದ; ಸಾರ್ವಜನಿಕರು ಮನೆಯ ಸುತ್ತಮುತ್ತಲಿನಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳು ಬಾರದಂತೆ ನೋಡಿಕೊಳ್ಳಬೇಕಿದೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಸಂಗಮೇಶ ಅಂಗಡಿ ತಿಳಿಸಿದರು.
ಪಟ್ಟಣದ ಪುರಸಭಾ ಆವರಣದಲ್ಲಿ ಪುರಸಭೆ, ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆಯಿಂದ ಗುರವಾರ ಹಮ್ಮಿಕೊಂಡ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಜ್ವರ ನಿಯಂತ್ರಣವನ್ನುಜಾಗೃತಿ ಜಾಥಾ ಕಾರ್ಯಕ್ರಮವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿ ಮಾತನಾಡಿದ ಅವರು. ಈಡಿಸ್ ಈಜಿಪ್ಪೆöÊ ಸೋಳ್ಳೆಗಳು ಉತ್ಪತ್ತಿಯಾಗುವ ಸ್ಥಳಗಳಾದ ನೀರಿನ ತೊಟ್ಟಿಗಳು ಹೂವಿನ ಕುಂಡಗಳು, ಟೈರ್-ಟ್ಯೂಬ್‌ಗಳು, ತೆಂಗಿನ ಚಿಪ್ಪಗಳು,ಖಾಲಿ ಬಾಟಲಿಗಳಲ್ಲಿ ಸೊಳ್ಳೆ ಉತ್ಪಾದನೆಯಾಗುವುದನ್ನು ಮೂಲದಲ್ಲೇ ತಡೆಯಬೇಕು. ನೀರಿನ ಸಂಗ್ರಹ ಸ್ಥಳದಲ್ಲೇ ಈ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ನೀರಿನ ಮೂಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ನೀರಲ್ಲೇ ಸೊಳ್ಳೆಗಳು ಸಂತಾನೋತ್ಪತ್ತಿ ಆಗದಂತೆ ಎಚ್ಚರ ವಹಿಸಬೇಕು. ರೋಗದ ಲಕ್ಷಣಗಳು ಕಂಡಬAದರೆ ಕೂಡಲೇ ತಜ್ಞೆ ವೈಧ್ಯರಿಂದ ಚಿಕಿತ್ಸೆ ಪಡೆಯಬೇಕು ಎಂದರು.
ಪುರಸಭೆಯ ಮ್ಯಾನೇಜರ ಎಂ.ಎಸ್.ಕಳ್ಳಿಗುಡ್ಡ ಮಾತನಾಡಿ, ಈಗಾಗಲೇ ಪಟ್ಟಣದ ಮನೆಯ ಸುತ್ತಮುತ್ತಲು ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಪುರಸಭೆಯಿಂದ ಪಾಗಿಂಗ್ ಮತ್ತು ಮೇಲಾಥಿನ್ ಪೌಂಡರ್ ಸಿಂಪಡಿಸಲಾಗಿದ್ದು, ಆರೋಗ್ಯ ಇಲಾಖೆ ವತಿಯಿಂದ ಪ್ರತಿ ಶುಕ್ರವಾರ ಮನೆ ಮನೆಗೂ ತೆರಳಿ ಲಾರ್ವಾ ಸಮೀಕ್ಷೆ ನಡೆಸಿ ಜನರಲ್ಲಿ ಅರಿವು ಮೂಡಿಸುವ ಕೆಲಸಗಳನ್ನು ಮಾಡುತ್ತಿದೆ. ಸಾರ್ವಜನಿಕರು ಜ್ವರ ಕಾಣಿಸಿಕೊಂಡರೆ ಕೂಡಲೆ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಸಿಡಿಪಿಒ ವೆಂಕಪ್ಪ ಗಿರಿತಿಮ್ಮಣ್ಣನವರ, ಪುರಸಭೆಯ ಸಿಬ್ಬಂದಿಗಳಾದ ಡಿ.ಡಿ.ಹಗೇದಾಳ, ಮುತ್ತಣ್ಣ ಹುಣಶ್ಯಾಳ ,ಮಹಾಂತೇಶ ತಾರಿವಾಳ, ಬಾಬು ಲೈನ್, ನೀರುಪಾದಿ ಬದಾಮಿ, ಆರೋಗ್ಯ, ಪುರಸಭೆಯ ಇಲಾಖೆಯ ಸಿಬ್ಬಂದಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಇದ್ದರು.