ಶಾಲೆಯಲ್ಲಿನ ಅಕ್ಕಿ ಮತ್ತು ಬೆಳೆಯನ್ನು ಕಳ್ಳತನ ಮಾಡುತ್ತಿರುವ ಖದೀಮರು
ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಣಗಂಡಿ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ
ಅನುದಾನಿತ ಮಕ್ಕಳಿಗೆ ಬಂದAತಹ, ಬಿಸಿಯೂಟದ ಅಕ್ಕಿ ಮತ್ತು ಬೆಳೆಯನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ
ಘಟನೆ ಮಂಗಳವಾರ ರಾತ್ರಿ ನಡೆದಿದೆ. ಗ್ರಾಮದಲ್ಲಿ ಸುಮಾರು ಎರಡು ಮೂರು ಸರ್ಕಾರಿ ಶಾಲೆಗಳಲ್ಲಿ
ಸತತವಾಗಿ ಕಳ್ಳತನ ಮಾಡುತ್ತಿದ್ದಾರೆ. ಸಮೀಪದ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಿದರೂ ಕಳ್ಳತನ ಕೃತ್ಯಗಳು ನಿಲ್ಲುತ್ತಿಲ್ಲ,
ಅಕ್ಕಿ ಮತ್ತು ಬೆಳೆಯನ್ನು ಕಳ್ಳತನ ಮಾಡುವ ಖದೀಮರನ್ನು ಬಾಗಲಕೋಟ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು
ಬೇಗನೆ ಪತ್ತೆ ಹಚ್ಚಿ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಸಲೀಂ ಒತ್ತಾಯಿಸಿದ್ದಾರೆ.