Kisan Sangh ಕಳಪೆ ಬೀಜ ಮತ್ತು ನಕಲಿ ರಸಗೊಬ್ಬರ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳುವಂತೆ ಕಿಸಾನ್ ಸಂಘ ಮನವಿ
ಬಾದಾಮಿ ತಾಲ್ಲೂಕಿನಲ್ಲಿ ಕಳಪೆ ಬೀಜ ಮತ್ತು ನಕಲಿ ರಸಗೊಬ್ಬರ ವಿತರಣೆಯಾಗುತ್ತ್ತಿದ್ದು ರೈತರು ಲಕ್ಷಾಂತರ ರುಪಾಯಿ
ಬಿತ್ತನೆ ಕಾರ್ಯ ಕೈಗೊಂಡು ಹಾನಿಗೊಳಗಾಗಿ ರೈತರ ಜೀವನ ದುಸ್ತರವಾಗಿದೆ.. ಬಾದಾಮಿ ತಹಶೀಲ್ದಾರ್ ತಾಲೂಕಾ
ದಂಡಾಧಿಕಾರಿಗಳು ತಕ್ಷಣ ನಕಲಿ ರಸಗೊಬ್ಬರ ಹಾಗೂ ಕಳಪೆ ಬೀಜಗಳ ತಯಾರಕರನ್ನು ಹಾಗೂ ಮಾರಾಟಗಾರನ್ನೂ
ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಬೇಕು,ರೈತರಿಗೆ ನ್ಯಾಯ ಒದಗಿಸಬೇಕೆಂದು ಭಾರತೀಯ ಕಿಸಾನ್ ಸಂಘ ಬಾದಾಮಿ
ಘಟಕದಿಂದ ಇಂದು ಬಾದಾಮಿ ತಾಲೂಕಾ ದಂಡಾಧಿಕಾರಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಬಾದಾಮಿ ಘಟಕದ ತಾಲೂಕಾಧ್ಯಕ್ಷ ರುದ್ರಗೌಡ. ಸಂ.ಪಾಟೀಲ,
ಜಿಲ್ಲಾಧ್ಯಕ್ಷರಾದ ವಿರೂಪಾಕ್ಷಯ್ಯ.ಪಂ. ಹಿರೇಮಠ,ಜಿಲ್ಲಾ ಯುವ ಪ್ರಮುಖರಾದ ಕಿರಣಕುಮಾರ್.ಕುಮಾರ.
ಕುಲಕರ್ಣಿಉತ್ತರ ಪ್ರಾಂತದ ಸುಭಮಗೌಡ ಪಾಟೀಲ, ಎಸ್. ಎಸ್.ಪಾಟೀಲ,ಮಲ್ಲಿಕಾರ್ಜುನ ಹುಡೇಪ್ಪನವರ,
ಆನಂದ ಪಾಟೀಲ, ಮುಂತಾದವರು ಮನವಿ ಸಲ್ಲಿಕೆಯಲ್ಲಿ ಪಾಲ್ಗೊಂಡಿದ್ದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾಗಲಕೋಟೆನ್