Koodalasangama Colony ಕತ್ತಲಲ್ಲಿ ಕೂಡಲಸಂಗಮ ಕಾಲೋನಿ ಒಂದು ತಿಂಗಳಾದರೂ ಬೀದಿ ದೀಪ ದುರಸ್ಥಿ ಮಾಡದ ಅಧಿಕಾರಿಗಳು
ಬಾಗಲಕೋಟ ಜಿಲ್ಲೆಯ ಇಳಕಲ್ ಪೋಲಿಸ್ ಠಾಣೆಯ ಹಿಂಭಾಗದಲ್ಲಿ ಇರುವ ಕೂಡಲಸಂಗಮ
ಕಾಲೋನಿಯಲ್ಲಿನ ನಾಲ್ಕೆöÊದು ಬೀದಿ ದೀಪಗಳು ಹಾಳಾಗಿ ಹೋಗಿದ್ದು ಒಂದು ತಿಂಗಳಾದರೂ
ಸಂಬAಧಪಟ್ಟ ಅಧಿಕಾರಿಗಳು ದುರಸ್ಥಿ ಮಾಡದೇ ಕಣ್ಣು ಕಿವಿ ಮುಚ್ಚಿಕೊಂಡು ಕುಳಿತಿದ್ದಾರೆ.
ಕಾಲೋನಿಯಲ್ಲಿನ ನಿವಾಸಿಗಳು ಸಾಕಷ್ಟು ಬಾರಿ ಸಂಬAದಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ
ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ವಯೋವೃದ್ದರು, ಸಣ್ಣ ಪುಟ್ಟ ಮಕ್ಕಳು ಸಂಚರಿಸುವಾಗ
ಏನಾದರೂ ತೊಂದರೆ ಆದರೆ ಅಧಿಕಾರಿಗಳೇ ಹೊಣೆಹೊರಬೇಕಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.





