ಸಂಭ್ರಮದಿ0ದ ನಡೆದ ಕೂಡಲಸಂಗಮ ಕಾಲೋನಿ ಸಂಗಮೇಶ್ವರ ಜಾತ್ರಾ ಮಹೋತ್ಸವ
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಪೋಲಿಸ್ ಠಾಣೆಯ ಹಿಂದುಗಡೆ ಇರುವ ಕೂಡಲಸಂಗಮ ಕಾಲೋನಿಯ ಸಂಗಮೇಶ್ವರ ಜಾತ್ರಾ ಮಹೋತ್ಸವ ಸೋಮವಾರದಂದು ಮಧ್ಯಾಹ್ನ ಸಡಗರ ಸಂಭ್ರಮದಿ0ದ ನಡೆಯಿತು.
ಜಾತ್ರಾ ಮಹೋತ್ಸವ ಅಂಗವಾಗಿ ಎರೆ ಹಳ್ಳದಲ್ಲಿ ಇರುವ ಸಂಗಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ವಿಧಿವತ್ತಾಗಿ ನಡೆದವು. ನಂತರ ಬಂದ ಎಲ್ಲಾ ಭಕ್ತಾಧಿಗಳಿಗಾಗಿ ಉದರ ಸಜ್ಜಕ ಬದನೆಕಾಯಿ ಪಲ್ಯ ಉಪ್ಪಿನಕಾಯಿ ಅನ್ನ ಸಾರು ಪ್ರಸಾದವನ್ನು ವಿತರಿಸಲಾಯಿತು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.