ಫಲಶೃತಿ ವಿದ್ಯುತ್ ಕಂಬಕ್ಕೆ ಸುತ್ತಿದ ಬಳ್ಳಿಯನ್ನು ತೆರವುಗೊಳಿಸಿದ ಕೆಪಿಟಿಸಿಎಲ್ ಸಿಬ್ಬಂದಿ
ಇಳಕಲ್ : ಕೆಪಿಟಿಸಿಎಲ್ ಅಧಿಕಾರಿಗಳೇ ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಿ ಎಂಬ ಶೀರ್ಷಿಕೆ ಅಡಿಯಲ್ಲಿ ಪಬ್ಲಿಕ್ ಟೈಮ್ಸ್ ಸುದ್ದಿಯನ್ನು ಪ್ರಕಟಿಸಿತ್ತು.
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಬಸವ ನಗರದ ಹನಮಸಾಗರ ಕಡೆ ಹೋಗುವ ರಸ್ತೆಯಲ್ಲಿನ ವಿದ್ಯುತ್ ಕಂಬಕ್ಕೆ ಬಳ್ಳಿ ಸಂಪೂರ್ಣವಾಗಿ ಸುತ್ತುವರೆದಿದ್ದು ಮುಂದಾಗಬಹುದಾದ ಅನಾಹುತವನ್ನು ಕೆಪಿಟಿಸಿಎಲ್ ಅಧಿಕಾರಿಗಳು ಬೇಗನೆ ಎಚ್ಚೆತ್ತುಕೊಂಡು ತಪ್ಪಿಸಬೇಕಾಗಿದೆ.
ಮಳೆಗಾಲ ಇದ್ದರಿಂದ ಗಾಳಿ ಬೀಸುತ್ತಾ ಇರುತ್ತದೆ. ಗಾಳಿಗೆ ಒಂದಕ್ಕೊAಡು ಮೇನ್ ವಾಯರ್ ಟಚ್ ಆಗಿ ಸ್ಪಾರ್ಕ ಆಗಿ ವೈಯರ್ ಕಟ್ ಆಗಿ ಬೀಳುವ ಸಂಭವವಿದ್ದು. ಅಲ್ಲಿಯೇ ಚಿಕ್ಕ ಮಕ್ಕಳ ಶಾಲೆ ಮತ್ತು ಸಾರ್ವಜನಿಕರು ಸಂಚರಿಸುವದ್ದಲ್ಲೇ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಅನಾಹುತ ಸಂಭವಿಸುವ ಲಕ್ಷಣಗಳು ಹೆಚ್ಚಾಗಿದ್ದು.
ಈಗಾಗಲೇ ಜಿಲ್ಲೆಯಲ್ಲಿ ವಿದ್ಯುತ್ ಅವಘಡಗಳು ಹೆಚ್ಚಾಗಿದ್ದು ಕೆಲವರು ಸಾವನ್ನಪ್ಪಿದ್ದಾರೆ. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಬೇಗನೆ ಎಚ್ಚೆತ್ತುಕೊಂಡು ಕಂಬಕ್ಕೆ ಸುತ್ತಿರುವ ಬಳಿಯನ್ನು ತೆರವುಗೊಳಿಸಿಸಬೇಕೆಂದು ಸಾರ್ವಜನಿಕರ ಪರವಾಗಿ ಬಾಲನಗೌಡ ಗೌಡರ ಮನವಿ ಮಾಡಿಕೊಂಡಿದ್ದರು.
” ಈ ಸುದ್ದಿಯನ್ನು ನೋಡಿದ ತಕ್ಷಣ ಎಚ್ಚೆತ್ತುಕೊಂಡು ಕೆಪಿಟಿಸಿಎಲ್ ಅಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಕಳುಹಿಸಿ ಕಂಬಕ್ಕೆ ಸುತ್ತಿಕೊಂಡಿದ್ದ ಬಳ್ಳಿಯನ್ನು ತೆಗೆದು ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.
ಸಿಬ್ಬಂದಿಯವರ ಈ ಕಾರ್ಯಕ್ಕೆ ಸ್ಥಳೀಯ ನಿವಾಸಿಗಳು ಮತ್ತು ಪಬ್ಲಿಕ್ ಟೈಮ್ಸ ತಂಡ ಧನ್ಯವಾದವನ್ನು ಸಲ್ಲಿಸಿದ್ದಾರೆ.”
ವರದಿ : ಭೀಮಣ್ಣ ಗಾಣಿಗೇರ