KudalSangam ಕೃಷ್ಣಾ ನದಿ ದಡದ ಜಮೀನಿಗೆ ನುಗ್ಗಿದ ನೀರು: ಬೆಳೆಗಳು ಹಾನಿ
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕೃಷ್ಣಾ ನದಿ ದಡದ
ಕೂಡಲಸಂಗಮ, ವಳಕಲದಿನ್ನಿ, ಬಿಸಲದಿನ್ನಿ, ಕಮಲದಿನ್ನಿ, ತುರಡಗಿ, ಕಟಗೂರ ಗ್ರಾಮಗಳ
ರೈತರ ಜಮೀನಿಗೆ ನೀರು ನುಗ್ಗಿ ಬೆಳೆದು ನಿಂತ ಸೂರ್ಯಕಾಂತಿ, ಕಬ್ಬು ಮುಂತಾದ ಬೆಳೆಗೆ ಹಾನಿ ಆಗಿದೆ.
ಕೃಷ್ಣಾ ನದಿ ರಭಸದಿಂದ ಹರಿಯುತ್ತಿದ್ದು, ನದಿಯ ದಡಕ್ಕೆ ಜನ, ಜಾನುವಾರಗಳು ಹೊಗದಂತೆ ಗ್ರಾಮದಲ್ಲಿ
ಡಂಗೂರ ಸಾರಲಾಗಿದೆ. ದಿನದಿಂದ ದಿನಕ್ಕೆ ನದಿಯಲ್ಲಿ ನೀರು ಏರಿಕೆಯಾಗುತ್ತಿರುವುದರಿಂದ ನದಿಯ
ದಡದ ರೈತರಿಗೆ, ಗ್ರಾಮದ ಜನರಿಗೆ ಆತಂಕ ಮೂಡಿದೆ.