Legal action will be taken if farmers are cheated: APMC Administrator Raju Rathoda ರೈತರಿಗೆ ಮೋಸ ಮಾಡಿದರೇ ಕಾನೂನು ಕ್ರಮ ಕೈಗೊಳ್ಳಲಾಗುವದು : ಎಪಿಎಂಸಿ ಆಡಳಿತಾಧಿಕಾರಿ ರಾಜು ರಾಠೋಡ

WhatsApp Group Join Now
Telegram Group Join Now
Instagram Group Join Now
Spread the love

 

Legal action will be taken if farmers are cheated: APMC Administrator Raju Rathoda   ರೈತರಿಗೆ ಮೋಸ ಮಾಡಿದರೇ ಕಾನೂನು ಕ್ರಮ ಕೈಗೊಳ್ಳಲಾಗುವದು : ಎಪಿಎಂಸಿ ಆಡಳಿತಾಧಿಕಾರಿ ರಾಜು ರಾಠೋಡ

APMC  ರೈತರಿಗೆ ಮೋಸ ಮಾಡಿದರೇ ಕಾನೂನು ಕ್ರಮ ಕೈಗೊಳ್ಳಲಾಗುವದು : ಎಪಿಎಂಸಿ ಆಡಳಿತಾಧಿಕಾರಿ ರಾಜು ರಾಠೋಡ

ಇಳಕಲ್ : ನಗರದಲ್ಲಿನ ಎಪಿಎಂಸಿಯಲ್ಲಿ ವರ್ತಕರು, ರೈತರು ಹುಟ್ಟುವಳಿ ಮಾರಾಟ ಮಾಡುವಾಗ ತೂಕದಲ್ಲಿ ಮೋಸ ಹಾಗೂ ದಲ್ಲಾಲಿ ಪಡೆಯುವ ಕುರಿತು ಹಾಗೂ ಹಮಾಲರು ಕಾಳು ತೆಗೆದುಕೊಳ್ಳುವದನ್ನು ವಿರೋಧಿಸಿ ಗುರುವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಹಲವು ವರ್ಷಗಳಿಂದ ಇಳಕಲ್ಲ ತಾಲೂಕಿನಲ್ಲಿ ನಿರಂತರ ರೈತರಿಗೆ ಮೋಸ ಅನ್ಯಾಯ ಮಾಡುತ್ತಿರುವದನ್ನು ಖಂಡಿಸಿ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದಾಗ ಎಪಿಎಂಸಿ ವರ್ತಕರು ಹಾಗೂ ರೈತರ ಸಮ್ಮುಖದಲ್ಲಿ ಎಪಿಎಂಸಿ ಆಡಳಿತಾಧಿಕಾರಿ ರಾಜು ರಾಠೋಡ ನೇತೃತ್ವದಲ್ಲಿ ಸಭೆಯನ್ನು ನಡೆಸಿ ಮಾತನಾಡಿದ ಅವರು ಸರಕಾರದ ನಿಯಮಾನುಸಾರವಾಗಿ ವ್ಯಾಪಾರಸ್ಥರು ರೈತರ ಜೊತೆ ವ್ಯವಹಾರ ಮಾಡಬೇಕು ಎಂದು ಎಚ್ಚರಿಕೆಯನ್ನು ನೀಡಿದರು.

ರೈತರು ಬೆಳೆದ ಉತ್ಪನ್ನಗಳನ್ನು ಎಲೆಕ್ಟಾçನಿಕ್ ತೂಕದಯಂತ್ರದ ಮೂಲಕವೇ ತೂಕ ಮಾಡಿರಿ ಹಾಗೂ ರೈತರಿಮದ ಉತ್ಪನ್ನಗಳನ್ನು ಖರೀದಿಸಿದ ದಿನವೇ ರೈತರಿಗೆ ಲೆಕ್ಕ ತಿರುವಳಿ ಪಟ್ಟಿ ನೀಡುವದು, ಹಾಗೂ ರೈತರಿಂ ಯಾವುದೇ ದಲ್ಲಾಲಿ ರಿವಾಜು ಪಡೆಯತಕ್ಕದಲ್ಲ. ರೈತರ ಉತ್ಪನ್ನಗಳನ್ನು ತೂಕ ಮಾಡುವಾಗ ಖಾಲಿ ಚೀಲದ ತೂಕಕ್ಕೆಸಮನಾಗಿ ಸೂಟ್ ಪಡೆಯುವದು ಹಾಗೂ ಗೋಣಿಚಿಲಗಳಲ್ಲಿ ತೂಕ ಮಾಡುವದು, ರೈತರ ಉತ್ಪನ್ನಗಳನ್ನು ತೂಕ ಮಾಡುವಾಗ ತಮ್ಮ ಅಂಗಡಿಯ ಹಮಾಲರಿಗೆ ರೈತರಿಂ ಕೆಳಕಾಳನ್ನು ಪಡೆಯಬಾರದೆಂದು ತಿಳಿಸಿದರು. ಒಂದು ವೇಳೆ ವರ್ತಕರ ವಿರುದ್ಧ ಮತ್ತೇ ದೂರುಗಳು ಬಂದರೆ ಅವರ ಮೇಲೆ ಕಾನೂನುಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.

ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಆರ್.ಎಂ.ದAಡಿನ, ಸಹಾಯಕ ಕಾರ್ಯದರ್ಶಿ ಪಿ.ಎಂ.ಪಟ್ಟಣಶೆಟ್ಟರ, ಲೆಕ್ಕಾಧಿಕಾರಿ ಎ.ಕೋರಿ, ಮಾರಾಟ ಸಹಾಯಕ ಬಸವರಾಜ ಜಡಿಯಪ್ಪನವರ ಇದ್ದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ಕಾರ್ಯಾಧ್ಯಕ್ಷ ಗುರು ಗಾಣಿಗೇರ, ಉಪಾಧ್ಯಕ್ಷ ಬಸವರಾಜ ಹುಡೇದಮನಿ, ರಾಜಶೇಖರ ಹುಡೇದಮನಿ, ರೇವಣಸಿದ್ದಪ್ಪ ದೇಗನಾಳ, ಗುಂಡಪ್ಪ ಕೌದಿ, ಶಾಂತಗೌಡ ಪಾಟೀಲ, ಮಂಜುನಾಥ ಗೌಡರ, ಮಾಹಾಂತಗೌಡ ಸೊಲಬಗೇರಿ,ರಾಜಸಾಬ ವಾಲಿಕಾರ, ಕುಮಾರಗೌಡ ಪಾಟೀಲ, ನಿತೀಶ ಬೀಳಗಿ ಮತ್ತು ರೈತರು ಇದ್ದರು.

* ರೈತರಿಗೆ ಪದೇ ಪದೇ ವರ್ತಕರು, ದಲ್ಲಾಲಿಗಳು ಮೋಸ, ಅನ್ಯಾಯ ಮಾಡುತ್ತಿದ್ದರೇ ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ – ಗುರು ಗಾಣಿಗೇರ, ರೈತ ಸಂಘದ ಕಾರ್ಯಾಧ್ಯಕ್ಷ


Spread the love

Leave a Comment

error: Content is protected !!