Legal system has deteriorated in the state: JDS alleges ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ : ಜೆಡಿಎಸ್ ಆರೋಪ

WhatsApp Group Join Now
Telegram Group Join Now
Instagram Group Join Now
Spread the love

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ : ಜೆಡಿಎಸ್ ಆರೋಪ

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ : ಜೆಡಿಎಸ್ ಆರೋಪ

 

ಇಳಕಲ್ : ಹುಬ್ಬಳ್ಳಿಯಂತಹ ನಗರದಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಎರಡು ಬೀಭತ್ಸ ಕೊಲೆಗಳನ್ನು ಮಾಡಿದ್ದು ನೋಡಿದರೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದು ಕಂಡು ಬರುತ್ತದೆ ಎಂದು ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಉಮೇಶ ಶಿರೂರ ಆರೋಪಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು ಹುಬ್ಬಳ್ಳಿಯ ನೇಹಾ ಹಿರೇಮಠ ಚುನಾವಣೆ ಸಮಯದಲ್ಲಿ ಮತ್ತು ಈಗ ಅಂಜಲಿ ಕೊಲೆಗಳು ನಡೆದಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಒಂದು ಕೊಲೆ ಕಾಲೇಜು ಕ್ಯಾಂಪಸ್ ದಲ್ಲಿ ಎಲ್ಲರೆದುರಿಗೆ ಇನ್ನೊಂದು ಕೊಲೆ ಅವಳ ಅಜ್ಜಿಯ ಎದುರಿಗೆ ನಡೆದಿದ್ದು ಕಾನೂನು ಮತ್ತು ಸುವ್ಯವಸ್ಥೆ ಎಲ್ಲಿ ಹೋಗಿದೆ ಎಂದು ಕೇಳಿದ್ದಾರೆ.

ಸರಕಾರ ಮತ್ತು ಪೋಲಿಸ್ ಇಲಾಖೆ ಕೂಡಲೇ ತಪ್ಪಿತಸ್ಥರನ್ನು ಕಾನೂನಿಗೆ ಒಪ್ಪಿಸಿ ಅವರಿಗೆ ಉಗ್ರ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

 

 


Spread the love

Leave a Comment

error: Content is protected !!