Leopard attack ಪಟ್ಟದಕಲ್ಲದಲ್ಲಿ ಚಿರತೆ ದಾಳಿ: ಘಾಡ ನಿದ್ರೆಗೆ ಜಾರಿದ ಅರಣ್ಯಾಧಿಕಾರಿಗಳು ಅವಿನಾಶ್ ಸಾರಥಿ ಆಕ್ರೋಶ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಪಟ್ಟದಕಲ್ಲದಲ್ಲಿ ಚಿರತೆ ಒಂದು ಪ್ರತಕ್ಷಗೊಂಡು ಗ್ರಾಮದಲ್ಲಿ
ಭಯದ ವಾತಾವರಣ ನಿಮಿ೯ಸಿದೆ. ಮಂಗಳವಾರದAದು ಗ್ರಾಮದಲ್ಲಿ ಹಸುವಿನ ಮೇಲೆ ಚಿರತೆ ದಾಳಿ
ಮಾಡಿದ್ದರಿಂದ ಹಸು ಅಸುನೀಗಿದ್ದರಿಂದ ಗ್ರಾಮದಲ್ಲಿನ ರೈತರು ಹೊಲಗಳಿಗೆ ತೆರಳಲು ಹಿಂಜರುತ್ತಿದ್ದಾರೆ.
ಇಂತಹ ಘಟನೆ ನಡೆದರೂ ಸಂಬAಧಪಟ್ಟ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರದೇ ಘಾಡ ನಿದ್ರೆಗೆ ಜಾರಿದ್ದಾರೆ
ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸದಸ್ಯ ಅವಿನಾಶ್ ಸಾರಥಿ ಆರೋಪಿಸಿದ್ದಾರೆ.
ಆದಷ್ಟು ಬೇಗನೆ ಚಿರತೆಯನ್ನು ಸೆರೆ ಹಿಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)