leopard attack ಗುಳೇದಗುಡ್ಡ ಭಾಗದಲ್ಲಿ ಮತ್ತೆ ಚಿರತೆ ಹಾವಳಿ, ಚಿರತೆ ಆಕ್ರಮಣಕ್ಕೆ ನಾಯಿ ಬಲಿ
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಾಯದಗುಂದಿ ವಲಯ ಪ್ರದೇಶದಲ್ಲಿ ಚಿರತೆ ಹಾವಳಿ ಮತ್ತೆ ಶುರುವಾಗಿದ್ದು
ನಿನ್ನೆಯಷ್ಟೇ ಚಿರತೆ ದಾಳಿಗೆ ನಾಯಿಯೊಂದು ಬಲಿಯಾಗಿರುವುದು ದೃಢಪಟ್ಟಿದೆ ಎಂದು ಬಾದಾಮಿ ವಲಯ ಅರಣ್ಯಾಧಿಕಾರಿ
ಮಹೇಶ್ ಮರಿಯಣ್ಣವರ ಸ್ಪಷ್ಟಪಡಿಸಿದ್ದಾರೆ.
ಸ್ವಲ್ಪ ದಿನಗಳ ಹಿಂದೆಯಷ್ಟೇ ಗುಳೇದಗುಡ್ಡ ಭಾಗದ ಬೆಟ್ಟಗಳಲ್ಲಿ ಚಿರತೆ ಹಾವಳಿಗೆ ಜಾನುವಾರುಗಳು ಬಲಿಯಾಗಿದ್ದನ್ನು
ಇಲ್ಲಿ ನೆನಪಿಸಬಹುದು. ಚಿರತೆಯೇ ನಾಯಿಯನ್ನು ತಿಂದಿರುವ ಬಗ್ಗೆ ಚಿರತೆಯ ಹೆಜ್ಜೆ ಗುರುತುಗಳ ಫೋಟೋಗಳನ್ನು ಬಾದಾಮಿ
ವಲಯ ಅರಣ್ಯಾಧಿಕಾರಿಗಳು ದೃಢಪಡಿಸಿರುವ ಫೋಟೋಗಳು ಲಭ್ಯವಾಗಿವೆ.
ಚಿರತೆ ನಾಯಿಯನ್ನು ತಿಂದಿರುವ ದೃಶ್ಯವನ್ನು ನೋಡಿರುವ ಸಾರ್ವಜನಿಕರು ಭಯಭೀತರಾಗಿದ್ದು ಕೂಡಲೇ ಅರಣ್ಯ
ಇಲಾಖೆ ಅಧಿಕಾರಿಗಳು ಚಿರತೆಯನ್ನು ಹಿಡಿಯಬೇಕು ಎಂದು ಆಗರಾಗಿಸಿದ್ದಾರೆ ಎನ್ನಲಾಗ್ತಾ ಇದೆ.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ