Lingavata Kayaka Sanjeevini Pattina Cooperative Society ಲಿಂಗವAತ ಕಾಯಕ ಸಂಜೀವಿನಿ ಪತ್ತಿನ ಸಹಕಾರಿ ಸಂಘಕ್ಕೆ ೧೩.೧೭ ಲಕ್ಷ ರೂ ನಿವ್ವಳ ಲಾಭ : ವಿಶ್ವನಾಥ ಪಾಟೀಲ
ಇಳಕಲ್ಲ : ಇಲ್ಲಿನ ಲಿಂಗವAತ ಕಾಯಕ ಸಂಜೀವಿನಿ ಪತ್ತಿನ ಸಹಕಾರಿ ಸಂಘದ ೨೦೨೪-೨೫ ನೇ ಸಾಲಿಗೆ
ರೂ. ೧೩,೧೭,೦೬೦-೧೦ ನಿವ್ವಳ ಲಾಭ ಗಳಿಸಿದ್ದು ಸಂಘದ ಶೇರುದಾರರಿಗೆ ಶೇ.೧೦ ರಷ್ಟು ಡಿವ್ಹಿಡೆಂಡ ವಿತರಿಸಲು
ಸಂಘದ ಅಧ್ಯಕ್ಷ್ಷ ವಿಶ್ವನಾಥ ವಿ. ಪಾಟೀಲ ಹಾಗೂ ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ನಿರ್ಧರಿಸಿದ್ದಾರೆ.
ಸಂಘದ ಗ್ರಾಹಕರು, ಸಾಲಗಾರರು ಹಾಗೂ ಸರ್ವ ಸದಸ್ಯರು ಸಂಘಕ್ಕೆ ಭರಣಾ ಮಾಡಬೇಕಾದ ಸಾಲ ಹಾಗೂ
ಸಾಲದ ಮೇಲಿನ ಬಡ್ಡಿಯನ್ನು ಸರಿಯಾದ ಅವಧಿಯಲ್ಲಿ ಭರಣಾ ಮಾಡಿ ಸಂಘವು ಲಾಭದತ್ತ ಮುನ್ನಡೆಯಲು
ಸಹಾಯ ಸಹಕಾರವನ್ನು ನೀಡಿದ ಸರ್ವ ಸದಸ್ಯರಿಗೆ ಸಂಘದ ಅಧ್ಯಕ್ಷ ವಿಶ್ವನಾಥ ಪಾಟೀಲ ಹಾಗೂ ಉಪಾಧ್ಯಕ್ಷ
ಶಶಿಕಲಾ ಪಾಟೀಲ ಹಾಗೂ ನಿರ್ದೇಶಕÀ ಮಂಡಳಿಯ ಸದಸ್ಯರಾದ ದುರಗಪ್ಪ ಪೂಜಾರಿ, ನಂದಿನಿ ಮ. ಹರ್ತಿ,
ಬಸವರಾಜ ಜಾಲಿಹಾಳ, ಶರಣಬಸನಗೌಡ ಪಾಟೀಲ, ರವಿಚಂದ್ರ ಹರ್ಲಾಪೂರ, ಶಂಕರ ಶಿವಬಲ್À, ಶಿವಯೋಗಯ್ಯ ಮಠದ,
ಮಲ್ಲಪ್ಪ ರಾ. ಬಮ್ಮಸಾಗರ, ಗುರುಶಿದ್ದಪ್ಪಗೌq ಪಾಟೀಲ, ಸುರೇಶ ಬಂಡರಗಲ್ಲ ರವರು ಈ ಪತ್ರಿಕಾ ಪ್ರಕಟಣೆ ಮೂಲಕ
ಅಭಿನಂದನೆಯನ್ನು ತಿಳಿಸಿದ್ದಾರೆ.
ಸಂಘದ ೧೯ ನೇ ವಾರ್ಷಿಕ ಸರ್ವ ಸಾದಾರಣಾ ಸಭೆಯನ್ನು ದಿನಾಂಕ: ೧೨/೦೯/೨೦೨೫ ಶುಕ್ರವಾರ
ಮುಂಜಾನೆ ೧೦-೩೦ ಗಂಟೆಗೆ ಶ್ರೀ ವಿಜಯ ಮಹಾಂತೇಶ ಮಠದ ದಾಸೋಹ ಭವನ ಗಾಂಧಿಚೌಕ,
ಇಲಕಲ್ಲದಲ್ಲಿ ಕರೆಯಲಾಗಿದೆ. ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದು ಈ ಸಭೆಯನ್ನು ಯಶಸ್ವಿಗೊಳಿಸಬೇಕೆಂದು
ಸಂಘದ ಮುಖ್ಯಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಕರಡಿ ತಿಳಿಸಿದ್ದಾರೆ.