Lok Sabha Election ಲೋಕಸಭೆ ಚುನಾವಣೆ : ಹುನಗುಂದ ತಾಲೂಕಾಡಳಿದಿಂದ ಸಕಲ ಸಿದ್ಧತೆ
ಹುನಗುಂದ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರ ಮತ್ತು ಚುನಾವಣಾ ಸಾಮಗ್ರಿಗಳನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಪಟ್ಟಣದ ವಿಜಯ ಮಹಾಂತೇಶ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆಯಿತು.
ತಹಸೀಲ್ದಾರ ನಿಂಗಪ್ಪ ಬಿರಾದರ ಮಾತನಾಡಿ, ಚುನಾವಣೆಯ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ಮತದಾನ ಯಂತ್ರ, ಕಂಟ್ರೋಲ್ ಯೂನಿಟ್, ವಿವಿ ಪ್ಯಾಟ್ ಮತ್ತು ಅಗತ್ಯ ಪರಿಕರಗಳನ್ನು ವಿತರಿಸುವ ಸಲುವಾಗಿ ಸೂಕ್ತ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿದ್ದು, ಚುನಾವಣೆಯ ಪೂರ್ವ ಸಿದ್ದತೆಯಲ್ಲಿ ತೊಡಗುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಗೊಂದಲಕ್ಕೆ ಅವಕಾಶವಾಗದಂತೆ ಪ್ರತಿಯೊಂದು ವಿಷಯವನ್ನು ಕಾಳಜಿಯಿಂದ ನಿರ್ವಹಿಸಲಾಗಿದೆ. ಹುನಗುಂದ ಕ್ಷೇತ್ರದಲ್ಲಿ ೨೪೫ ಮತಗಟ್ಟೆಗಳಿದ್ದು, ೧೨೨೦ ಮಂದಿ ಸಿಬ್ಬಂದಿಯನ್ನು ನಿಯೋಜಿಸಿದ್ದು, ಈಗಾಗಲೇ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆಎಂದು ತಿಳಿಸಿದರು.
೧ ಮತಗಟ್ಟೆ ಕೇಂದ್ರಕ್ಕೆ ನಾಲ್ವರು ಸಿಬ್ಬಂದಿಯನ್ನು ನೇಮಿಸಿದ್ದು, ಎಲ್ಲಾ ರೀತಿಯ ಮೂಲ ಸೌಕರ್ಯ ಒದಗಿಸಲಾಗಿದೆ. ಅಲ್ಲದೆ, ಯಾರಾದರೂ ಸಿಬ್ಬಂದಿ ಅನಾರೋಗ್ಯ ತಪ್ಪಿದರೆ ಪರ್ಯಾಯವಾಗಿ ನಿಯೋಜಿಸಲು ಹೆಚ್ಚುವರಿ ಯಾಗಿ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಈಗಾಗಲೇ ಎಲ್ಲಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಮಹಿಳೆಯರಿಗೆ ಅನುಕೂಲವಾಗಲಿ ಎಂದು ಪಟ್ಟಣದ ವಿಜಯ ಮಹಾಂತೇಶ ಹೈಸ್ಕೂಲ್‌ನಲ್ಲಿ ಪಿಂಕ್ ಬೂತ್‌ಗಳನ್ನು ತೆರೆಯಲಾಗಿದೆ. ಅಲ್ಲದೆ, ಹಿರಿಯನಾಗರಿಕರು ಮತ್ತು ಅಂಗವಿಕಲರು ಮತದಾನ ಮಾಡಲು ಅನುಕೂಲವಾಗುವಂತೆ ವ್ಹೀಲ್ ಚೇರ್‌ವ್ಯವಸ್ಥೆ ಮಾಡಲಾ ಗಿದೆ. ಮತಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ೨೧೧ ಮಂದಿಯಿAದ ಮತದಾನ ಮಾಡಿಸಲಾಗಿದೆ ಎಂದು ತಿಳಿಸಿದರು.
ಹುನಗುಂದ ಮತ ಕ್ಷೇತ್ರದಲ್ಲಿ ೨.೨೬.೧೬೪ ಮತದಾರರಿದ್ದು, ಅದರಲ್ಲಿ ಪುರುಷರ ೧.೮೮.೦೫೩ ಮಹಿಳೆಯರು ೧.೧೩.೮೯೮ ಹಾಗೂ ೧೩ಜನ ತೃತೀಯ ಲಿಂಗಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು. ಸಹಾಯಕ ಚುನಾವಣಾಧಿಕಾರಿ ಶ್ರೀಧರ ಗೋಟೂರ , ಹಿಂದೂಳಿದ ಇಲಾಖೆಯ ಸಹಾಯಕ ಅಧಿಕಾರಿ ಜಿ.ಎಸ್.ಖ್ಯಾಡಿ, ಬಿಇಒ ಜಾಸ್ಮೀನ ಕಿಲ್ಲೇದಾರ, ತಾಪಂ ಇಒ ತಾರಾ ಇದ್ದರು.