ಲೋಕಸಭಾ ಚುನಾವಣೆ ೨೦೨೪ : ಕುಟುಂಬ ಸಮೇತ ಅಗಮಿಸಿ ಮತ ಚಲಾಯಿಸಿದ ರಾಜಕೀಯ ನಾಯಕರು
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಹುನಗುಂದ ಮತಕ್ಷೇತ್ರದಶಾಸಕ ವಿಜಯಾನಂದ ಕಾಶಪ್ಪನವರ ತಮ್ಮ ಹುಟ್ಟುರಾದ ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ಮತಗಟ್ಟೆ ೧೯ ರಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಸಹೋದರನೊಂದಿಗೆ ಮತವನ್ನು ಚಲಾಯಿಸಿದರು.
ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಇಳಕಲ್‌ದ ಸಜ್ಜನ ವಿದ್ಯಾವರ್ಧಕ ಸಂಘದಲ್ಲಿನ ಮತಗಟ್ಟೆ ಸಂಖ್ಯೆ ೧೫೯ ರಲ್ಲಿ ಸರತಿ ಸಾಲಿನಲ್ಲಿ ನಿಂತು ಕುಟುಂಬಸ್ಥರೊAದಿಗೆ ಮತ ಚಲಾಯಿಸಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಪುತ್ರ ರಾಜುಗೌಡ ಪಾಟೀಲ್, ಧರ್ಮಪತ್ನಿ ದೇವಮ್ಮ ಪಾಟೀಲ್ ಮತ್ತು ಸೊಸೆ ಹಾಗೂ ಮಕ್ಕಳು ಇದ್ದರು.
ಅದೇ ರೀತಿ ಬಾಗಲಕೋಟ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಿ.ಸಿ,ಗದ್ದಿಗೌಡರ ಬಾದಾಮಿಯ ಟಿ.ಎ.ಪಿ.ಸಿ.ಎಂ.ಎಸ್. ನಲ್ಲಿರುವ ಮತಗಟ್ಟೆ ಸಂ.೧೬೨ರಲ್ಲಿ ತಮ್ಮ ಹಕ್ಕು ಚಲಾಯಿಸಿ ಮಾತನಾಡಿದರು.
ವರದಿ : ಭೀಮಣ್ಣ ಗಾಣಿಗೇರ ಇಳಕಲ್ಲ
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ