ಲೋಕಸಭೆ ಚುನಾವಣೆ ; ಇಳಕಲ್ ನಗರದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಪೌರಾಯುಕ್ತ ರಾಜಾರಾಮ ಪವಾರ
೨೦೨೪ ರ ಲೋಕಸಭಾ ಚುನಾವಣೆ ಮೇ ೦೭ ರಂದು ನಡೆಯಲಿದ್ದು ಇಂದು ಇಳಕಲ್ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರನಗರದ 52 ಮತಗಟ್ಟೆಗಳಿಗೆ ಸೋಮವಾರ ಸಾಯಂಕಾಲದAದು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ತಮ್ಮ ಸಿಬ್ಬಂದಿಗಳೊAದಿಗೆ ಪರಿಶೀಲಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಗರದಲ್ಲಿ ಒಟ್ಟು ೫೨ ಮತಗಟ್ಟೆಗಳಿದ್ದು ಎಲ್ಲಾ ಮತಗಟ್ಟೆಗಳಿಗೆ ಅಧಿಕಾರಿಗಳು ಆಗಮಿಸಿದ್ದಾರೆ. ನಾಳೆ ನಡೆಯಲಿರುವ ಮತದಾನ ಕ್ರಿಯೆಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮಾಡಿಕೊಳ್ಳುತ್ತಾಯಿದ್ದೇವೆ.
ಎಲ್ಲಾ ಮತಗಟ್ಟೆಗಳಿಗೂ ಮೂಲಭೂತ ಸೌಕರ್ಯಗಳನ್ನು ಕೊಟ್ಟಿದ್ದೇವೆ ದಯವಿಟ್ಟು ನಾಳೆ ದಿನ ಮುಂಜಾನೆ ೦೭ ಗಂಟೆಯಿAದ ಸಂಜೆ ೬ ಗಂಟೆಯವರೆಗೂ ಮತದಾನ ಮಾಡಲು ಅವಕಾಶವಿದ್ದು ಆದ್ದರಿಂದ ಪ್ರತಿಯೊಬ್ಬರು ತಪ್ಪದೇ ಮತದಾನವನ್ನು ಮಾಡಬೇಕು ಎಂದು ಅವರು ಪಬ್ಲಿಕ್ ಟೈಮ್ಸ್ ನ್ಯೂಸ್ ಮೂಲಕ ಸಾರ್ವಜನಿಕರಿಗೆ ಮನವಿಯನ್ನು ಮಾಡಿಕೊಂಡರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ) ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ