ಭಗವಾನ ಬುದ್ಧನ ಜ್ಞಾನ ಜಗತ್ತಿಗೆ ಬೆಳಕು: ಗುರುಮಹಾಂತ ಶ್ರೀಗಳು
ಇಳಕಲ್: ನಗರದ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿ ಗುರುವಾರ ನಡೆದ ೨೫೬೮ನೇ ವೈಶಾಖ ಬುದ್ಧ ಪೂರ್ಣಿಮೆ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಪ್ರಿಯದರ್ಶಿನಿ ಆಮದಿಹಾಳ ಮಾತನಾಡಿ ಬುದ್ಧ ಅರಮನೆ ತೊರೆದು, ಕಠಿಣ ತಪಸ್ಸು ಆಚರಿಸಿ ಜ್ಞಾನೋದಯ ಮಾಡಿಕೊಂಡು ತಾನು ಕಂಡುಕೊAಡ ಶಾಶ್ವತ ಸತ್ಯವನ್ನು ಸಾರಿದರು. ಅವರು ಮಹಾ ದಾರ್ಶನಿಕ, ತತ್ವಜ್ಞಾನಿ ಆಗಿದ್ದರು’ ಎಂದರು. ‘ಬುದ್ಧ ದುಃಖಕ್ಕೆ ಕಾರಣ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಕುರಿತು ಹೇಳುವ ಸತ್ಯಗಳು ಮಾನವನ ಆಂತರಿಕ ಅರಿವಿನ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತವೆ.
ಪಂಚಶೀಲ ತತ್ವಗಳು ಮಾನವನ ಬಾಹ್ಯ ಪ್ರಜ್ಞೆಯ ನೀತಿ ಪ್ರಧಾನವಾದ ಬದುಕನ್ನು ಕಟ್ಟಿಕೊಡುತ್ತವೆ’ ಎಂದರು. ಪೂಜ್ಯ ಡಾ.ಗುರುಮಹಾಂತ ಶ್ರೀಗಳು ಮಾತನಾಡಿ, ಬುದ್ಧ ತತ್ವ ಜ್ಞಾನ ನಿಜವಾದ ಅರ್ಥದಲ್ಲಿ ಅದೊಂದು ಜೀವನ ಮಾರ್ಗವಾಗಿದೆ.
ಬುದ್ಧ, ಬಸವಣ್ಣ ದೊಡ್ಡ ಅಜ್ಜರು ಹೇಳಿದ್ದು ಅದನ್ನೇ ಜ್ಞಾನ ಮಾಡಿ ನಿಮ್ಮ ಮನಸ್ಸು ನಿಲ್ಲಿಸುವ ಸಾಧನ ಮಾಡಿರಿ. ಮಾನವನ ಪ್ರಮುಖವಾಗಿ ಆಧ್ಯಾತ್ಮಿಕ ಜೀವನವಾಗಿದೆ. ಅದನ್ನು ಬುದ್ಧ ಮಾನವೀಯ ಪ್ರಜ್ಞೆಯೊಂದಿಗೆ ಹಿಂದೆಯೇ ಸಾರಿದ್ದಾರೆ’ ಹಾಗೂ ಮೂಡನಂಬಿಕೆಯಿAದ ಬ್ಯಾಟಿ ಹೆಸರಿನಲ್ಲಿ ಪ್ರಾಣಿ ಬಲಿಯನ್ನು ಮಾಡಬೇಡಿ ಮೂಡನಂಬಿಕೆಯಿAದ ಹೊರಗೆ ಬರುವುದು ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೇತೃತ್ವ ವಹಿಸಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ದಲಿತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶರಣಪ್ಪ ಆಮದಿಹಾಳ , ಉಪಾಧ್ಯಕ್ಷರಾದ ಯುವರಾಜ್ ಚಲವಾದಿ, ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ ,ಬಿ.ಎಚ್ ಮಾದರ ಗುರುಗಳು, ಹಿರಿಯರಾದ ಬಸಪ್ಪ ಮುಧೋಳ್, ಯಮನಪ್ಬ ಬೀಳಗಿ ಇನ್ನೂ ಮುಂತಾದವರು ಇದ್ದರು.