Cooperative Society ಇಳಕಲ್ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮಹಾಬಳೇಶ್ವರ ಮರಟದ ಆಯ್ಕೆ
ಇಳಕಲ್ : ನಗರದ ಇಳಕಲ್ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಸಭೆ ಸಂಘದ
ಕಾರ್ಯಾಲಯದಲ್ಲಿ ಮಂಗಳವಾರದAದು ನಡೆಯಿತು. ಅಧ್ಯಕ್ಷರಾಗಿ ಮಹಾಬಳೇಶ್ವರ ಮರಟದ, ಉಪಾಧ್ಯಕ್ಷರಾಗಿ ಶ್ರೀನಿವಾಸ ಕಾಳಗಿ
ಅವಿರೋಧವಾಗಿ ಆಯ್ಕೆಯಾದರು. ಆಯ್ಕೆಯಾದ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸಂಘದ
ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಸತ್ಕರಿಸಿ ಗೌರವಿಸಿದರು.






