Shivakumar award ಶಿವಕುಮಾರ ಪ್ರಶಸ್ತಿಗೆ ಮಹಾಂತೇಶ ಗಜೇಂದ್ರಗಡ ಆಯ್ಕೆ
ಇಳಕಲ್ : ಸಾಣೆಹಳ್ಳಿ ಮಠದ ವತಿಯಿಂದ ಕೊಡಮಾಡುವ ಡಾ ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು
ಇಲ್ಲಿನ ರಂಗ ಸಂಘಟಕ ಮಹಾಂತೇಶ ಗಜೇಂದ್ರಗಡ ಅವರಿಗೆ ದೊರೆತಿದೆ.
ಕಳೆದ ೪೨ ವರ್ಷಗಳಿಂದ ರಂಗಭೂಮಿ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಮಹಾಂತೇಶ ಗಜೇಂದ್ರಗಡ ವೃತ್ತಿ
ಮತ್ತು ಹವ್ಯಾಸಿ ರಂಗಭೂಮಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಕಷ್ಟು ದುಡಿದಿದ್ದು ನಾಡಿನ
ನಾನಾ ಕಲಾವಿದರ ಸಂಘಟನೆಗೆ ಶ್ರಮಿಸಿದ್ದಾರೆ. ಈ ಕಾರಣದಿಂದಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಸ್ಮರಣಿಕೆಯ
ಜೊತೆಗೆ ೫೦ ಸಾವಿರ ನಗದು ಹಣ ನೀಡಿ ಗೌರವಿಸಲಾಗುವದು ಎಂದು ಶ್ರೀಮಠದ ಪಂಡಿತಾರಾಧ್ಯ ಸ್ವಾಮೀಜಿಗಳು ತಿಳಿಸಿದ್ದಾರೆ.