ಮಲ್ಲಮ್ಮನ ಆದರ್ಶ ಮಹಿಳೆಯರಿಗೆ ಮಾದರಿ : ಡಾ ಚನ್ನಬಸವ ಶಿವಾಚಾರ್ಯರು
ಇಳಕಲ್ : ಅತ್ತೆ ಕೊಟ್ಟ ಅಂಬಲಿಯನ್ನೇ ಅಮೃತ ಎಂಬAತೆ ಸೇವಿಸಿದ ಹೇಮರೆಡ್ಡಿ ಮಲ್ಲಮ್ಮ ಇಂದಿನ ಮಹಿಳೆಯರಿಗೆ ಆದರ್ಶವಾಗಿದ್ದಾಳೆ ಎಂದು
ನಂದವಾಡಗಿ ಮಠದ ಡಾ ಚನ್ನಬಸವ ಶಿವಾಚಾರ್ಯರು ಹೇಳಿದರು.
ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮದಲ್ಲಿ ಆರಂಭವಾದ ಪುರಾಣ ಪ್ರವಚನ ಉದ್ಘಾಟಿಸಿ ಮಾತನಾಡಿದ ಅವರು ಮಲ್ಲಮ್ಮನ ಭಕ್ತಿ,
ಸಹನೆ,ಸೇವೆ ಅತ್ಯಂತ ಉತ್ಕೃಷ್ಟವಾಗಿದ್ದು ಅದನ್ನೆಲ್ಲಾ ಪಾಲಿಸಬೇಕು ಟಿವಿ ಮುಂದೆ ಕುಳಿತು ಕೊಳ್ಳುವದಕ್ಕಿಂತ ಇಂತಹ ಕಾರ್ಯಕ್ರಮದಲ್ಲಿ
ಭಾಗವಹಿಸಿ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಆರಂಬಿಸಿರುವ ಪುರಾಣವನ್ನು
ಸಿದ್ದಬಸವ ಕಬೀರಾನಂದ ಸ್ವಾಮಿಗಳು ಹೇಳುತ್ತಿದ್ದಾರೆ. ಇದೇ ಸಮಯದಲ್ಲಿ ಇಳಕಲ್ ದ ಸಂಗೀತಗಾರ ಗಣೇಶ ರಾಯಬಾಗಿ
ಇವರಿಂದ ಸಂಗೀತ ಸುಧೆ ನಡೆಯಿತು. ಮಹಾಂತೇಶ ಮೇರಾಖೋರ ಸ್ವಾಗತಿಸಿದರು ದೊಡ್ಡಬಸಯ್ಯ ಶಾಸ್ತ್ರೀ ವಂದಿಸಿ ನಿರೂಪಿಸಿದರು
ದೇಣಿಗೆ : ದೇವಸ್ಥಾನ ನಿರ್ಮಿಸಲು ದೇಣಿಗೆ ಕೊಟ್ಟ ೨೫ ಜನ ದಾನಿಗಳನ್ನು ಸತ್ಕರಿಲಾಯಿತು.





