hard work ಸತತ ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯ ಮಲ್ಲನಗೌಡ ಗೌಡರ
ಕಂದಗಲ್ಲ: ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೨೦೨೪-೨೫ ನೆ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಅತ್ಯಂತ ವಿಜೃಂಭಣೆಯಿAದ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ, ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಶಿಕ್ಸಕರಾದ ಮಲ್ಲನಗೌಡ ಗೌಡರ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯದ ನಿರ್ಮಾಣಕ್ಕಾಗಿ ಪ್ರೇರಣೆ ನೀಡಿದರು. ಇದೆ ಸಂದರ್ಭದಲ್ಲಿ ಇಳಕಲ್ಲನ ಎಸ್ ಆರ್ ಕಂಠಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಪ್ರಮುಖ ಭಾಷಣಕಾರರಾದ ಸಂಗಣ್ಣ ಗದ್ದಿ ಗುರುಗಳು ಹಾಗೂ ಇಳಕಲ್ಲನ ಪ್ರಖ್ಯಾತ ತೆರಿಗೆ ಸಲಹೆಗಾರರಾದ ಪ್ರಶಾಂತ ಹಂಚಾಟೆಯವರು ಹಾಗೂ ಕಂದಗಲ್ಲ ಗ್ರಾಮದ ಪತ್ರಕರ್ತರಾದ ವೀರೇಶ ಶಿಂಪಿಯವರು ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಹಿತವಚನವನ್ನು ನೀಡುವುದರ ಮೂಲಕ ಮೆರಗನ್ನು ಹೆಚ್ಚಿಸಿದರು. ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾಲಕ ಪ್ರತಿನಿಧಿಗಳಾಗಿ ಗ್ಯಾನಪ್ಪ ರೋಣದ ಹಾಗೂ ಮುತ್ತುರಾಜ ಕಟಾಪುರ ಉಪಸ್ಥಿತರಿದ್ದರು.ಶಾಲೆಯ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಹತ್ತಿಯವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಶ್ರೀ ಸುನೀಲಕುಮಾರ ಕಠಾರಿಯವರು ಸ್ವಾಗತಿಸಿ, ಅತಿಥಿಗಳ ಪರಿಚಯವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ನೆಡೆದ ಸನ್ಮಾನ ಕಾರ್ಯಕ್ರಮದ ನಿರೂಪಣೆಯನ್ನು ಅಜೀತ ಆಲಮಟ್ಟಿಯವರು ನೆರವೇರಿಸಿದರು. ವಿವಿಧ ಕ್ರೀಡೆ ಹಾಗೂ ಸಾoಸ್ಕೃತಿಕ ಚಟುವಟಿಕೆಗಲ್ಲಿ ಭಾಗವಹಿಸಿದ ವಿಧ್ಯಾರ್ಥಿಗಳಿಗೆನೆಡೆದ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕರಾದ ಹುಸೇನ ಮಕಾನದರ ನೆಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸುರೇಖಾ ಗೋಳಸಂಗೀಮಠ ಹಾಗೂ ಶ್ರೀ ಚಿದಾನಂದ ಗೌಡರ ಮಾಡಿದರು. ಶ್ರೀಮತಿ ಕೋಮಲ ತೇಲಿ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಪಾಲಕ ಬಂಧುಗಳು ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.