accident ಡಬಲ್ ಟ್ರೇಲರ ಜೋಡಣೆಯ ಟ್ರ‍್ಯಾಕ್ಟರ್ ಅಪಘಾತದಲ್ಲಿ ವ್ಯಕ್ತಿ ಸಾವು
ಇಳಕಲ್ : ಡಬಲ್ ಟ್ರೇಲರ ಜೋಡಿಸಿಕೊಂಡ ಹೊರಟ ಟ್ರ‍್ಯಾಕ್ಟರದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಕೆಳಗೆ ಬಿದ್ದು
ಅದೇ ಟ್ರ‍್ಯಾಕ್ಟರ ಹಿಂದಿನ ಟ್ರೇಲರ ಹಾಯ್ದು ಸಾವನ್ನಪ್ಪಿದ ಘಟನೆ ಹಿರೇಕೊಡಗಲಿ ಗ್ರಾಮದ ಬಳಿ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ಸಾತಪ್ಪ ಸಂಗಪ್ಪ ತಾಂಬೆ (೩೫) ಈ ದುರಂತದಲ್ಲಿ
ಮೃತಪಟ್ಟ ವ್ಯಕ್ತಿಯಾಗಿದ್ದು ಕುಷ್ಟಗಿ ಊರಿನಿಂದ ಇಳಕಲ್ ಕಡೆಗೆ ಬರುವಾಗ ಈ ಘಟನೆ ನಡೆದಿದೆ.
ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪಿಎಸ್ ಐ ಮಲ್ಲು ಸತ್ತಿಗೌಡರ ತನಿಖೆ ನಡೆಸಿದ್ದಾರೆ.
ವರದಿ: ಭೀಮಣ್ಣ ಗಾಣಿಗೇರ ಇಳಕಲ್ಲ