ಇಳಕಲ್ ನಗರದಲ್ಲಿ ವಿದ್ಯುತ್ ತಂತಿ ತಗಲಿ ವ್ಯಕ್ತಿಯರ್ವ ಸಾವು
ಬಾಗಲಕೋಟ ಜಿಲ್ಲೆಯ ಇಳಕಲ್ದ ಕ್ರಿಶ್ಚಿಯನ್ ರ್ಚ ಹತ್ತಿರ ಹೊಲದಲ್ಲಿ ಬಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶನಿವಾರದಂದು ನಡೆದಿದೆ.
ಹೊಲದಲ್ಲಿ ಇದ್ದ ರಾಡಿಯನ್ನು ಗಮನಿಸಿದ ವ್ಯಕ್ತಿ ಹಾದಿ ಬಸವನಗರದ 48 ರ್ಷದ ನಾಗೇಶ ಹನಮಂತಪ್ಪ ಬರಡ್ಡಿ ತನ್ನ ಚಪ್ಪಲಗಳನ್ನು ಕೈಯಲ್ಲಿ ಹಿಡಿದುಕೊಂಡು ಹೊಲದಲ್ಲಿ ಹೊರಟಾಗ ಮಳೆಯಿಂದಾಗಿ ಬಿದ್ದ ವಿದ್ಯುತ್ ಕಂಬದ ತಂತಿಯನ್ನು ತುಳಿದು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಧಾವಿಸಿದ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಪಿಎಸ್ ಐ ಷಹಜಹಾನ ನಾಯಕ ತನಿಖೆ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.