Massive blood donation camp inaugurated ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿದ ಪೂಜ್ಯರು

WhatsApp Group Join Now
Telegram Group Join Now
Instagram Group Join Now
Spread the love

Massive blood donation camp inaugurated ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿದ ಪೂಜ್ಯರು

blood ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿದ ಪೂಜ್ಯರು

ಇಳಕಲ್ – ಇಲ್ಲಿನ ಶ್ರೀವಿಜಯ ಮಹಾಂತೇಶ ಆಯುರ್ವೇದ ಮೆಡಿಕಲ್ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಅಡಿಯಲ್ಲಿ ಆರ್ ಪಿ ಕರಡಿ ಆಯುರ್ವೇದ ಆಸ್ಪತ್ರೆಯಲ್ಲಿ ಹಾಗೂ ವಿಜಯ ಮಹಾಂತ ರಕ್ತ ಭಂಡಾರ ಮತ್ತು ನಿಹಾರಿಕಾ ಫೌಂಡೇಶನ್, ಕಂದಗಲ್ಲ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಗುರುಮಹಾಂತಶ್ರೀಗಳು ಉದ್ಘಾಟಿಸಿದರು.
ಈ ಸಮಯದಲ್ಲಿ ಮಾತನಾಡಿದ ಅವರು ಜಂಕ್ ಆಹಾರವನ್ನು ತಿನ್ನಬೇಡಿ, ಆರೋಗ್ಯಕರ ಹಾಗೂ ಉತ್ತಮವಾದ ಆಹಾರವನ್ನು ಸೇವಿಸಿ, ಎಲ್ಲರೂ ಆರೋಗ್ಯವಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವೈಸ್ ಚೇರಮನ್ನ ಅರುಣ ಬಿಜ್ಜಳ ಅವರು ವಹಿಸಿ ಮಾತನಾಡಿ ರಕ್ತವನ್ನು ಕೊಡುವವರು ಸಂಪೂರ್ಣವಾಗಿ ಆರೋಗ್ಯವಾಗಿರಬೇಕೆಂದು ತಿಳಿಸಿದರು. ಮಹಾವಿದ್ಯಾಲಯದ ಚೇರಮನ್ನರಾದ ಶ್ರೀ ಎಂ.ಜಿ.ಪಟ್ಟಣಶೆಟ್ಟರ ಹಾಗೂ ಆಸ್ಪತ್ರೆಯ ಚೇರಮನ್ನರಾದ ಶ್ರೀ ಆರ್.ಆರ್. ಸೂಡಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಡಾ. ಶೀತಲ್, ರವಿ ಕೊಟಾರಿ, ಪ್ರಾಚಾರ್ಯರಾದ ಡಾ. ಕೆ.ಸಿ. ದಾಸ್ ಉಪಸ್ಥಿತರಿದ್ದರು. ಶ್ರೀ ವಿಜಯ ಮಹಾಂತ ರಕ್ತ ಭಂಡಾರದ ಮುಖ್ಯಸ್ಥ ಡಾ. ಎಂ.ಬಿ ಗೊಂಗಡಶೆಟ್ಟಿ ಹಾಗೂ ನಿಹಾರಿಕಾ ಫೌಂಡೇಶನ್ ಚೇರಮನ್ನ ವಿ.ಬಿ.ಜೀರಗಿ ಅವರನ್ನು ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.
ರಕ್ತದಾನ ಶಿಬಿರದಲ್ಲಿ ಸುಮಾರು ೧೦೦ ಶಿಬಿರಾರ್ಥಿಗಳು ರಕ್ತದಾನ ಮಾಡಿದರು.ಡಾ. ದೀಕ್ಷಾರವರು ಪ್ರಾರ್ಥಿಸಿದರು. ಡಾ. ಪ್ರಕಾಶ ತಾರಿವಾಳರವರು ಸ್ವಾಗತಿಸಿದರು. ಡಾ. ಸಿದ್ದಲಿಂಗಮೂರ್ತಿ ವಂದಿಸಿದರು. ಡಾ. ಮಂಜುಳಾ ಸರಗಣಾಚಾರಿ ನಿರೂಪಿಸಿದರು.


Spread the love

Leave a Comment

error: Content is protected !!