Massive protest by BJP condemning price hike of petrol and diesel ಪ್ರೇಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

WhatsApp Group Join Now
Telegram Group Join Now
Instagram Group Join Now
Spread the love

Massive protest by BJP condemning price hike of petrol and diesel

 ಪ್ರೇಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ತೀರ್ಥಹಳ್ಳಿ: ಪೇಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಗೃಹ ಸಚಿವ,ಶಾಸಕ ಆರಗ ಜ್ಞಾನೇಂದ್ರ ರವರ ನೇತೃತ್ವದಲ್ಲಿ ಬಿಜೆಪಿಯ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ರಸ್ತೆ ತಡೆದು ಪಟ್ಟಣದ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಇದೇ ವೇಳೆ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ವಾಹನವನ್ನು ಹಗ್ಗದಿಂದ ನೊಗ ಕಟ್ಟಿ ಎಳೆಯುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.

ನಂತರ ಕೊಪ್ಪ ಸರ್ಕಲ್ ನಿಂದ ಗಾಂಧಿ ಔಕದ ವರೆಗೆ ಪಾದಯಾತ್ರೆ ಮೂಲಕ ತೆರಳಿ ತಾಲೂಕು ದಂಡಾಧಿಕಾರಿಗೆ ಜಿಲ್ಲಾಧಿಕಾರಿ ರವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ಹಿನಾಯವಾಗಿ ಸೋಲು ಅನುಭವಿಸಿದ ಕಾರಣ ರಾಜ್ಯದ ಜನರಿಗೆ ತೊಂದರೆ ಕೊಡಬೇಕು ಅನ್ನುವ ದೃಷ್ಠಿಯಿಂದ ಪೆಟ್ರೋಲ್ ಮೂರು ರೂಪಾಯಿ ಡೀಸೆಲ್ ಮೂರು ವರೆ ರೂಪಾಯಿ ಬೆಲೆ ಏರಿಕೆ ಮಾಡಿದೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಿಜೆಪಿ ಸೋತಿದ್ದರಿಂದ ಇಡೀ ರಾಜ್ಯದ ಜನತೆ ಬಹಳ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.ಆದರೆ ರಾಜ್ಯದಲ್ಲಿ ನಯಾಪೈಸೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಜನರು ನಿರೀಕ್ಷೆ ಹುಸಿಯಾಗಿದೆ.

ಕಾಂಗ್ರೆಸ್‌ನವರು ಕೊಟ್ಟಿರುವ ಐದು ಗ್ಯಾರಂಟಿಗಳ ಜೊತೆ ಆರನೆಯ ಗ್ಯಾರಂಟಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಹೆಚ್ಚಿಸುತ್ತೇವೆ ಎಂದಿದ್ದರು ಆದರೆ ಈಗ ಅಂಗನವಾಡಿ ಕಾರ್ಯಕರ್ತೆಯರು ಸುರಿಯುವ ಮಳೆಯಲ್ಲಿಯೇ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗಿದೆ. ಅಂದು ಚುನಾವಣೆ ಸಂದರ್ಭದಲ್ಲಿ ಆರನೇ ಗ್ಯಾರಂಟಿ ಘೋಷಣೆ ಮಾಡಿ ಚುನಾವಣೆ ಗೆದ್ದ ಬಳಿಕ ಇಂದು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಕುಳಿತ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾತು ಕೂಡ ಆಡಿಸಲಿಲ್ಲ. ಅಕ್ಕಿ ಕೊಡುತ್ತೇವೆ ಎಂದರು ಅಕ್ಕಿ ಕೊಟ್ಟಿಲ್ಲ, ಕರೆಂಟ್ ಫ್ರೀ ಎಂದರು ಕರೆಂಟ್ ಬಿಲ್ ಹೆಚ್ಚಿಸಿದರು ನುಡಿದಂತೆ ನಡೆದಿದ್ದೇವೆ ಎಂದು ಪತ್ರಿಕೆಯಲ್ಲಿ ಕೊಟ್ಟಿದ್ದೇ ಕೊಟ್ಟಿದ್ದು. ವಿಧಾನ ಸಭೆಯಲ್ಲಿ ಕೂಡ ಘರ್ಜನೆ ಮಾಡುತ್ತಾರೆ ನೂರು ಬಾರಿ ಸುಳ್ಳುನ್ನು ಹೇಳುವ ರೀತಿ. ಬಜೆಟ್‌ನಲ್ಲಿ ಮೂರೂವರೆ ಲಕ್ಷ ಕೋಟಿ ಮಂಡನೆ ಮಾಡಿದ್ದಾರೆ ಅದರಲ್ಲಿ ಅರವತ್ತೆರೆಡು ಸಾವಿರ ಕೋಟಿ ಗ್ಯಾರಂಟಿಗೆಂದು ಇಟ್ಟಿದ್ದಾರೆ ಮತ್ತುಳಿದ ಹಣವನ್ನು ರಾಜ್ಯದ ಅಭಿವೃದ್ಧಿಗೆ ಕೊಡುತ್ತೇವೆಂದು ಹೇಳಿದ್ದಾರೆ ಆದರೆ ಇದುವರೆಗೂ ಯಾವ ಅಭಿವೃದ್ಧಿಗೂ ನಯಾಪೈಸೆ ಹಣ ಕೊಟ್ಟಿಲ್ಲ. ಧರ್ಮಸ್ಥಳದಲ್ಲಿ ಮಹಿಳೆಯರೇ ಇವರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಒಂದು ವರ್ಷದ ಒಳಗೆ ಇವರು ಜನಪ್ರಿಯತೆಯ‌ನ್ನು ಕಳೆದು ಕೊಂಡಿದ್ದಾರೆ.
ಈಗ ತಾವು ಜನರಿಗೆ ಕೊಟ್ಟ ಗ್ಯಾರಂಟಿಗಳನ್ನು ನೀಡುವ ಉದ್ದೇಶದಿಂದ ಹಣ ಸಂಗ್ರಹಿಸಲು ಪೇಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿ ರಾಜ್ಯದ ಜನರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಮಾಡುತ್ತಿದಾರೆ. ಕೇವಲ ತೈಲ ಬೆಲೆ ಅಲ್ಲದೆ ಮನೆಗಳ ಸುಂಕ, ಸ್ಟ್ಯಾಂಪ್ ಚಾರ್ಜ, ಬಾಂಡು ಸೇರಿದಂತೆ ಇನ್ನೂ ಅನೇಕ ದಿನಬಳಿಕೆ ವಸ್ತುಗಳ ಬೆಲೆ ಹೆಚ್ಚು ಮಾಡುವ ಮೂಲಕ ರಾಜ್ಯದ ಜನರನ್ನು ಸಂಕಷ್ಟಕ್ಕೆ ತಂದಿದೆ ಎಂದರು.

ಈ ಸಂದರ್ಭದಲ್ಲಿ ಕುಕ್ಕೆ ಪ್ರಶಾಂತ್,ಚಕ್ಕಡಬೈಲು ರಾಘವೇಂದ್ರ ,ಹಸಿರುಮನೆ ನಂದನ್,ಸೇರಿದಂತೆ ಬಿಜೆಪಿ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.


Spread the love

Leave a Comment

error: Content is protected !!