ಚೈನಾ ಮಾಡುತ್ತಿದೆ ಭಾರತದ ಚುನಾವಣೆ ಫಲಿತಾಂಶವನ್ನೇ ಬದಲಿಸುವ ಸಂಚು!
ಭಾರತದ ಚುನಾವಣೆಯನ್ನ ಹೈಜಾಕ್ ಮಾಡೋದಕ್ಕೆ ಚುನಾವಣಾ ಫಲಿತಾಂಶವನ್ನು ಬದಲಿಸಿ ತನಗೆ ಬೇಕಾದವರನ್ನ ಗೆಲ್ಲಿಸುವುದಕ್ಕೆ ಚೀನಾ ತನ್ನ ಹ್ಯಾಕಿಂಗ್ ತಂತ್ರಜ್ಞಾನವನ್ನು ಬಳಸುವುದಕ್ಕೆ ಮುಂದಾಗಿದೆಯಾ? ಇಂತದೊಂದು ಸಂಚು ನಡೆದಿದೆ ಅನ್ನೋ ಮಾಹಿತಿಯನ್ನ ಮೈಕ್ರೋಸಾಫ್ಟ್ ಹೊರಹಾಕಿದೆ. ಭಾರತ, ಅಮೆರಿಕ ಹಾಗು ಇನ್ನಿತರ ದೇಶಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಚೀನಾ ಈ ಬಾರಿ ತನ್ನ ಕೈಚಳಕವನ್ನು ತೋರಿಸೊದ್ದಕ್ಕೆ ಹೋಗುತ್ತೆ, ಅನ್ನೋ ಎಚ್ಚರಿಕೆಯನ್ನ ಮೈಕ್ರೋಸಾಫ್ಟ್ ಕೊಟ್ಟಿದೆ.
ಹಾಗಂತ ನಮ್ಮ ಇವಿಎಂ ಮಿಷನ್ ಗಳನ್ನು ಹ್ಯಾಕ್ ಮಾಡಿ ನಾವು ಯಾರಿಗೂ ವೋಟ್ ಹಾಕಿದ್ರೆ, ಇನ್ಯಾರಿಗೋ ಮತ ಹೋಗೋ ಹಾಗೆ ಅಥವಾ ನಮ್ಮವರನ್ನೇ ಬದಲಾಯಿಸುವ ಕೆಲಸವನ್ನು ಚೀನಾ ಮಾಡುತ್ತ ಅಂತಲ್ಲ ಅದು ಸಾಧ್ಯವೂ ಇಲ್ಲ ಆದರೆ
ಚುನಾವಣೆಯ ಸಂದರ್ಭದಲ್ಲಿ ಚೀನಾ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಹಾಗು ಆ ಮೂಲಕ ತನಗೆ ಬೇಡವಾದ ಪಕ್ಷವನ್ನ ಈ ಚುನಾವಣೆಯಲ್ಲಿ ಸೋಲಿಸುವ ಪ್ರಯತ್ನವನ್ನು ಮಾಡತ್ತೆ ಅನ್ನೋದು ಮೈಕ್ರೋಸಾಫ್ಟ್ ಕೊಡುತ್ತಿರುವ ಎಚ್ಚರಿಕೆ! ಈ ಕೆಲಸವನ್ನು ಬರೀ ಭಾರತದಲ್ಲಿ ಮಾತ್ರ ಅಲ್ಲ ಅಮೆರಿಕಾದಲ್ಲಿ ಕೂಡ ಮಾಡುವ ಪ್ರಯತ್ನವನ್ನು ಚೀನಾ ಈಗಾಗಲೇ ಮಾಡ್ತಾ ಇದೆ ಅಂತ ಮೈಕ್ರೋಸಾಫ್ಟ್ ಹೇಳಿದೆ.
ಸುಮಾರು 60 ದೇಶಗಳು ಈ ವರ್ಷ ಚುನಾವಣೆಗಳನ್ನು ಎದುರಿಸುತ್ತಿವೆ !
ನಿಮಗೆ ಗೊತ್ತಿರಬೇಕು? 2024 ಅನ್ನು ಜಾಗತಿಕ ಚುನಾವಣಾ ವರ್ಷ ಮೊನ್ನೆಯಷ್ಟೇ ರಷ್ಯಾದಲ್ಲಿ ಚುನಾವಣೆಗಳು ಮುಗಿದಿವೆ. ಇದೇ ವರ್ಷ ತೈವಾನ್‌ನಲ್ಲಿ ಚುನಾವಣೆಗಳು ಭಾರತ ಚುನಾವಣೆಯ ಹೊಸ್ತಿಲಲ್ಲಿದೆ.
ಅಮೇರಿಕಾದಲ್ಲಿ ನವೆಂಬರ್ ಐದನೇ ತಾರೀಕು ಮತದಾನ ನಡೆಯತ್ತೆ ಹಾಗೆ ಯುರೋಪಿನ ಸಾಕಷ್ಟು ದೇಶಗಳಲ್ಲಿ ಕೂಡ ಈ ವರ್ಷ ಚುನಾವಣೆಗಳು ನಡೆಯಬೇಕು. ದಕ್ಷಿಣ ಕೊರಿಯಾದಲ್ಲಿ ಕೂಡ ಇದೇ ತಿಂಗಳು ಚುನಾವಣೆಗಳುನಡೆಯಲಿವೆ.
ಸುಮಾರು 60 ದೇಶಗಳು ಈ ವರ್ಷ ಚುನಾವಣೆಗಳನ್ನು ಎದುರಿಸುತ್ತಿವೆ ಇಡೀ ಜಗತ್ತಿನ ಶೇಕಡಾ ನಲವತ್ತರಷ್ಟು ಮಂದಿ ಈ ವರ್ಷ ತಮ್ಮ ನಾಯಕರನ್ನ ಸರ್ಕಾರವನ್ನು ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿಯೇ ಇದನ್ನು ಜಾಗತಿಕ ಚುನಾವಣಾ ವರ್ಷ ಅಂತ ಕರೆದಿದ್ದು ಹೀಗಾಗಿ
ಚೀನಾ ಈ ಬಾರಿ ತನ್ನ ತಂತ್ರಜ್ಞಾನವನ್ನು ಜಗತ್ತಿನ ಮೇಲೆ ಪ್ರಯೋಗ ಮಾಡತೆ ಮತ್ತು ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನ ಸುಳ್ಳು ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಪ್ರಭಾವಿತಗೊಳಿಸುವ ಪ್ರಯತ್ನವನ್ನು ಮಾಡುತ್ತದೆ.
ಮತಯಂತ್ರಗಳನ್ನು ಹ್ಯಾಕ್ ಮಾಡೋದಕ್ಕೆ ಸಾಧ್ಯ ಇಲ್ಲ. ನಮ್ಮ ಮತಗಳನ್ನು ತಿರುಚುವುದಕ್ಕೆ ಆಗುವುದಿಲ್ಲ.
ನಾವು ಯಾರಿಗೆ ವೋಟ್ ಹಾಕಬೇಕು ಅಂದುಕೊಂಡವರಿಗೆ ಮತ ಹಾಕ್ತಿವಿ. ಹೀಗಿರುವಾಗ ಇಲ್ಲಿ ಚೈನಾ ಏನು ಮಾಡೋದಕ್ಕೆ ಸಾಧ್ಯವಾಗುತ್ತೆ ಇದೆ. ಚೀನಾ ಸೊಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಸೃಷ್ಟಿ ಮಾಡಿದ ಮಿಮ್ಸ್ ಹಾಗು ವಿಡಿಯೋಗಳನ್ನ ತನಗೆ ಬೇಕಾದ ಹಾಗೆ ಪ್ರಚಾರ ಮಾಡ್ತಾ ಒಂದು ದೊಡ್ಡ ಅಪಪ್ರಚಾರದ ಸಮರಕ್ಕೆ ಇಳಿಯುತ್ತೆ.
ಆ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದು ಮೈಕ್ರೋಸಾಫ್ಟ್ ಕೊಡುತ್ತಿರುವ ಎಚ್ಚರಿಕೆ ಇತ್ತೀಚೆಗೆ ಅಮೇರಿಕಾದಲ್ಲಿ ಅಧ್ಯಕ್ಷ ಬಿಡೆನ್ ದನಿಯಲ್ಲಿ ಅಲ್ಲಿನ ಸಾಕಷ್ಟು ಮತದಾರರಿಗೆ ಒಂದು ಆಡಿಯೋ ಸಂದೇಶ ರವಾನೆ ಆಯಿತು. ಅದರಲ್ಲಿ ಯಾರು ಮತ ಚಲಾವಣೆ ಮಾಡಬೇಡಿ ಅಂತ ಬಿಡು ಮನವಿ ಮಾಡಿಕೊಂಡು ಆಗಿತ್ತು ಕೂಡ ಅದೇ ಇದನ್ನ ಕೇಳಿಸಿಕೊಂಡು ಜನ ಬುದ್ಧಿವಂತರು.
ಆದರೆ ನಕ್ಕು ಸುಮ್ಮನಾಗುತ್ತಾರೆ. ಹಾಗಲ್ಲದೆ ಅವಿದ್ಯಾವಂತ ಜನ ಆದ್ರೆ ನಿಜ ಇದ್ದರೂ ಇರಬಹುದು ಅಂತಾರೆ. ಹಾಗೆ ಒಂದೈದು 10% ಮತಗಳು ಏರುಪೇರಾದರೂ ಕೂಡ ಗೆಲ್ಲಬೇಕಾದ ಅಭ್ಯರ್ಥಿ ಸೋಲ್ತಾ ನೇ ಸೋಲ ಬೇಕಾದ ಅಭ್ಯರ್ಥಿ ಗೆಲ್ತಾನೆ.
ಭಾರತದಂತ ದೇಶದಲ್ಲಿ ಇದನ್ನ ಮಾಡೋದು ತುಂಬಾ ಸುಲಭ ನಾವು ವಾಟ್ಸಪ್, ಫೇಸ್ ಬುಕ್, ಟೆಲಿಗ್ರಾಂ ಟ್ವಿಟರ್ ಗಳಲ್ಲಿ ಬರೋ ಯಾವ ಸಂದೇಶವನ್ನು ಕೂಡ ಕ್ರಾಸ್‌ಚೆಕ್ ಮಾಡುವುದಿಲ್ಲ. ನಮ್ಮ ಬುದ್ಧಿವಂತಿಕೆ ಎಷ್ಟು ಅಂದ್ರೆ ಬಂದದ್ದೆಲ್ಲವನ್ನೂ ನಿಜ ಅಂದುಕೊಂಡಷ್ಟು ಅಥವಾ ನಮಗೆ ಇಷ್ಟವಾಗದಿರುವುದು ಏನು ಬಂದ್ರು ಅದು ಸುಳ್ಳು ಅಂದುಕೊಂಡಷ್ಟು ಮಾತ್ರ
ಯಾವ ಸಂದೇಶ ಸುದ್ದಿ ಕೂಡ ನಿಜನಾ ಸುಳ್ಳಾ ಅಂತ ಕ್ರಾಸ್‌ಚೆಕ್ ಮಾಡಿಕೊಳ್ಳಲು ತಾಳ್ಮೆ ನಮಗಿರುವುದಿಲ್ಲ. ಆ ಪ್ರಯತ್ನವನ್ನು ನಮ್ಮಲ್ಲಿ ಸಾಕಷ್ಟು ಜನ ಮಾಡೋದಕ್ಕೆ ಹೋಗೋದಿಲ್ಲ. ಇಂತಹ ಮತದಾರರು ಹೆಚ್ಚಿರುವ ದೇಶದಲ್ಲಿ ಅವರನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಇನ್ಫ್ಲುಯೆನ್ಸ್ ಮಾಡೋದು ತುಂಬಾ ಸುಲಭ.
ಅದಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಡೀಪ್ ಫೇಕ್ ವಿಡಿಯೋಗಳನ್ನು ತೇಲಿಬಿಟ್ಟರೆ ಮತದಾರರ ಮನಸ್ಸನ್ನು ಕೆಡಿಸಿ ಬಿಡಬಹುದು ಅನ್ನೋದು ಚೀನಾದ ಉದ್ದೇಶ. ಈಗ ನಿಮ್ಮ ಅಭಿಮಾನದ ನಾಯಕನೊಬ್ಬನ ಭಾಷಣದ ವಿಡಿಯೋ ಒಂದನ್ನ ಡಿಫರೆಂಟ್ ಮಾಡಿ ಆತ ಹೇಳದೆ ಇರೋದನ್ನೆಲ್ಲ ಆತನ ಬಾಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಆತನದೇ ದನಿಯಲ್ಲಿ ಹೇಳಿಸಿ ಅದನ್ನ ಸೋಷಿಯಲ್ ಮೀಡಿಯಾಗಳಲ್ಲಿ ತೇಲಿ ಬಿಟ್ಟರು ಅಂತ ಇಟ್ಕೊಳ್ಳಿ ನಮ್ಮಲ್ಲಿ ಸತ್ಯ ಚಪ್ಪಲಿ ಹಾಕೋ ಹೊತ್ತಿಗಾಗಲೇ ಸುಳ್ಳು ಊರೆಲ್ಲ ಅಲೆದಾಡಿರುತ್ತೆ ಹಾಗೆ ಈ ವಿಡಿಯೋ ಕ್ಷಣಮಾತ್ರದಲ್ಲಿ ಕೋಟ್ಯಂತರ ಜನರನ್ನು ತಲುಪಿ ಒಂದು ಅಭಿಪ್ರಾಯವನ್ನು ಕೂಡ ಬಿಲ್ಡ್ ಮಾಡಿಬಿಡುತ್ತೆ ಆಮೇಲೆ ಅದು ನಾನು ಹೇಳಿದ್ದಲ್ಲ ಅಂತ ನಾಯಕ ಎಷ್ಟೇ ಹೇಳಿದ್ರೂ ನಂಬೋ ನಂಬೋ ಯಾರು ಎಷ್ಟು ಜನ ನಂಬುತ್ತಾರೆ ಮತ್ತು ಅದು ಡೀಪ್ ಫೇಕ್ಅನ್ನೋದನ್ನ ಸಾಬೀತು ಪಡಿಸೋದಕ್ಕೆ ಎಷ್ಟು ದಿನ ಬೇಕಾಗಬಹುದು ಅಲ್ವಾ? ಮೊನ್ನೆ ತೈವಾನಿನಲ್ಲಿ ಚುನಾವಣೆಗಳಲ್ಲಿ ಅಲ್ಲಿ ಕೂಡ ಚೀನಾ ಇದೇ ತರದ ಪ್ರಯತ್ನವನ್ನು ಮಾಡಿತು.
ತೈವಾನ್‌ನ ನಾಯಕರ ವಿರುದ್ಧ ಸಾಕಷ್ಟು ಫೇಕ್ ವಿಡಿಯೋಗಳು ಸಂದೇಶಗಳನ್ನ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡಿತು.ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಬಳಸಿ ಟಿವಿ ಅಂಕರ್ ಗಳು ಸುದ್ದಿ ಒಂದು ಹಾಗೇನೇ ಒಂದಷ್ಟು ವಿಡಿಯೋಗಳನ್ನ ಕ್ರಿಯೆಟ್ ಮಾಡಿ ಅವುಗಳನ್ನು ಕೂಡ ಚುನಾವಣಾ ಅಪಪ್ರಚಾರಕ್ಕಾಗಿ ಬಳಕೆ ಮಾಡಿತ್ತು. ಆದರೂ ಕೂಡ ಚೀನಾದ ಎಲ್ಲ ಪ್ರಯತ್ನಗಳ ನಡುವೆನು ಅಲ್ಲಿ ಚೀನಾ ವಿರೋಧೀಗೆ ಆರಿಸಿಬಂದರು.
ಇನ್ನು ಅಮೆರಿಕದಲ್ಲಿ ಕೂಡ ಈಗಾಗಲೇ ಚೀನಾ ಇಂಥ ಪ್ರಯತ್ನವನ್ನ ಆರಂಭ ಮಾಡಿದೆ.ಅಲ್ಲಿ ಜನಾಂಗೀಯ ದ್ವೇಷಕ್ಕೆ ಕಾರಣವಾಗುವಂತಹ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಸಾರ ಮಾಡುವ ಕೆಲಸ ನಡೀತಾ ಇದೆ. ಇದು ಷಡ್ಯಂತ್ರದ ಭಾಗವಾಗಿರೋದ್ರಿಂದ ಅಲ್ಲಿ ಆ ವಿಡಿಯೋಗಳು ಅತಿ ಹೆಚ್ಚು ಜನರನ್ನು ತಲುಪು ಹಾಗೆ ಕೂಡ ಮಾಡಲಾಗುತ್ತೆ ಆ ವಿಡಿಯೋಗಳು ಜನರ ಮನಸ್ಸುಗಳಲ್ಲಿ ವಿಷ ತುಂಬಿ ಅದರಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತವೆ. ಇಂಥದೊಂದು ಟಾಸ್ಕನ ಚೀನಾ ತನ್ನ ಹಾಗೂ ಉತ್ತರ ಕೊರಿಯಾದ ಹ್ಯಾಕರ್ಸ್ಗೆ ಕೊಟ್ಟಿದೆ. ಚೀನಾದ ಫ್ಲ್ಯಾಕ್ಸ್ ಟೈಪ್ಫಾನ್ ಅನ್ನೋದು ಭಾರತ ಫಿಲಿಪ್ಪಿನ್ಸ್ ಹಾಂಗ್ ಕಾಂಗ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಟೆಲಿ ಕಮ್ಯೂನಿಕೇಷನ್ ಸಾಫ್ಟ್‌ವೇರ್ಗಳ ಮೇಲೆ ಪದೇ ಪದೇ ದಾಳಿ ಮಾಡುತ್ತಿದೆ ಮತ್ತು ಅವುಗಳನ್ನು ಹ್ಯಾಕ್ ಮಾಡುವ ಪ್ರಯತ್ನವನ್ನು ಮಾಡಿದೆ,
ಸೈಬರ್ ವಾರ್ ?
ಹಾಗೆ ಕಳೆದ ಫೆಬ್ರವರಿಯಲ್ಲಿ ಭಾರತದ ಪ್ರಧಾನಿಕಾರ್ಯಾಲಯ ಮತ್ತು ರಿಲಯನ್ಸ್ ಹಾಗು ಏರ್ ಇಂಡಿಯಾದ ವೆಬ್ ಸೈಟ್ ಗಳನ್ನ ಹ್ಯಾಕ್ ಮಾಡುವ ಪ್ರಯತ್ನ ಮಾಡಿದ್ದಾಗಿ ಚೀನಾದ ಹ್ಯಾಕರ್ಸ್‌ಗಳು ಹೇಳಿಕೊಂಡಿತ್ತು ಹಾಗೆ ಚೀನಾದ ಹ್ಯಾಕರ್ಸ್ ಭಾರತಕ್ಕೆ ಸೇರಿದ ಸುಮಾರು 95 ಗೀಗಾ ಬೈಟ್ ಅಷ್ಟು ಇಮಿಗ್ರೇಶನ್ ಡೇಟಾವನ್ನು ಕದ್ದಿದ್ದಾರೆ ಆ ಮಾಹಿತಿಯನ್ನು ಗಿಟ್ಟ ಹಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಇತ್ತೀಚಿಗಷ್ಟೇ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಹೀಗೆ ಭಾರತದ ವಿರುದ್ಧ ನಿರಂತರವಾಗಿ ಸೈಬರ್ ವಾರ್ ನಡೆಸಿರುವ ಚೀನಾ ಚುನಾವಣೆ ಸಮಯಗಳಲ್ಲಿ A i ಬೆಳಸಿ ಇಲ್ಲಿನ ಸರ್ಕಾರ ವನ್ನು ಬದಲಿಸುವ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ಪ್ರಯತ್ನವನ್ನು ಚೀನಾ ಮಾಡ್ತಾ ಇದೆ ಎಂದು ಮೈಕ್ರೋಸಾಫ್ಟ್ ಹೇಳ್ತಾ ಇದ್ದು
ಅದಕ್ಕಾಗಿ ಸ್ಟ್ರಂ 1376 ಹೆಸರಿನ ಚೈನಾ ಕಮ್ಯುನಿಸ್ಟ್ ಪಾರ್ಟಿ ನಂಟು ಹೊಂದಿರುವ ಗುಂಪೊಂದು ಪ್ರಯತ್ನ ಮಾಡುತ್ತಿದೆ ಅಂತ ಹೇಳಲಾಗುತ್ತಿದೆ ಅದಕ್ಕಾಗಿ A i ಬಳಕೆ ಮಾಡುತ್ತಿದ್ದಾರೆ . ಹೀಗೆ ಸುಳ್ಳು ಸುದ್ದಿಗಳನ್ನು ಅಬ್ಬಿಸಿ ಚೀನಾ ಪ್ರಜಾತಂತ್ರ ವ್ಯವಸ್ಥೆಯನ್ನ ಹಾಳುಗಡುವ ಪ್ರಯತ್ನಗಳನ್ನ ಮಾಡ್ತಾ ಇದ್ದು ನಾವು ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಎಲ್ಲಾ ಪೋಸ್ಟ್ಗಳನ್ನು ಸತ್ಯ ಯಾವುದು ಸುಳ್ಳು ಯಾವುದು ಎಂದು ಕ್ರಾಸ್ ಚೆಕ್ ಮಾಡ್ದೆ ಶೇರ್ ಮಾಡೋದನ್ನ ನಿಲ್ಲಿಸಬೇಕು.