ಶಾಸಕ ಕಾಶಪ್ಪನವರ ಮನೆಗೆ : ಸಚಿವ ಶಿವಾನಂದ ಪಾಟೀಲ ದಿಡೀರ ಭೇಟಿ
೨೦೨೪ ರ ಬಾಗಲಕೋಟೆ ಲೋಕಸಭಾ ಚುನಾವಣೆಯ ನಿಮಿತ್ಯ ಶಾಸಕ ವಿಜಯಾನಂದ ಕಾಶಪ್ಪನವರ ನಿವಾಸಕ್ಕೆ ಸಚಿವ ಶಿವಾನಂದ ಪಾಟೀಲ ಗುರುವಾರದಂದು ಧಿಡೀರ ಭೇಟಿ ನೀಡಿ ಚುನಾವಣೆಯ ಪ್ರಚಾರದ ಕುರಿತು ಚರ್ಚಿಸಿದರು.
ಬಾಗಲಕೋಟ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿಯಾದ ಸಂಯುಕ್ತಾ ಪಾಟೀಲ ಅವರನ್ನು ಕಾಂಗ್ರೆಸ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿ ಪ್ರಚಾರ ಮಾಡುವುದರ ಮೂಲಕ ಆಯ್ಕೆ ಮಾಡಿ ಸಂಸತ್ತಿಗೆ ಕಳಿಸೋಣ ಗುರಿ ನಮ್ಮದಾಗಿದೆ ಎಂದು ಶಾಸಕ,ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರು ಹೇಳಿದರು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ