Durga Devi Jatra festival ದಾಸಬಾಳ ದುರ್ಗಾದೇವಿ ಜಾತ್ರಾ ಮಹೋತ್ಸವ ಶಾಸಕ ಕಾಶಪ್ಪನವರಿಗೆ ಕುರಿ ಮರಿ ನೀಡಿ ಸತ್ಕಾರ
ಬಾಗಲಕೋಟ ಜಿಲ್ಲೆಯ ಇಳಕಲ್ಲ ತಾಲೂಕಿನ ದಾಸಬಾಳ ಗ್ರಾಮದ ದುರ್ಗಾದೇವಿ ಜಾತ್ರಾ
ಮಹೋತ್ಸವ ಬುಧವಾರದಂದು ಸಂಭ್ರಮದಿAದ ನಡೆಯಿತು.
ಜಾತ್ರಾ ಮಹೋತ್ಸವದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ
ವಿಜಯಾನಂದ ಕಾಶಪ್ಪನವರ ಪಾಲ್ಗೊಂಡು ದುರ್ಗಾದೇವಿಯ ದರ್ಶನ ಪಡೆದುಕೊಂಡರು.
ಈ ಸಮಯದಲ್ಲಿ ಗ್ರಾಮದ ಮುಖಂಡರು ಹಾಗೂ ದೇವಸ್ಥಾನದ ಜಿರ್ಣೋದ್ದಾರ ಪದಾಧಿಕಾರಿಗಳು
ಶಾಸಕರಿಗೆ ಕುರಿ ಮರಿಯನ್ನು ನೀಡಿ ವಿಶೇಷವಾಗಿ ಸತ್ಕರಿಸಿ ಗೌರವಿಸಿದರು. ಈ ಸಮಯದಲ್ಲಿ ಜಿಲ್ಲಾ
ಪಂಚಾಯತ ಸದಸ್ಯೆ ಚಂದಮ್ಮ ಓಲೇಕಾರ, ಗ್ರಾನೈಟ್ ಉದ್ಯಮಿ ಸಂಗಣ್ಣ ಓಲೇಕಾರ ಮತ್ತು
ಗ್ರಾಮದ ಹಿರಿಯರು ಮುಖಂಡರು ಯುವಕರು ಇದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)