12 ಪೋಲಿಸ್ ಕ್ವಾರ್ಟಸ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ವಿಜಯಾನಂದ ಕಾಶಪ್ಪನವರ
ಇಳಕಲ್ : ಕರ್ನಾಟಕ ರಾಜ್ಯ ಪೋಲಿಸ್ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಯಮಿತ ಉಪವಿಭಾಗ ವಿಜಯಪುರ ೨೦೨೫ ನೇ ಸಾಲಿನ
ಪೋಲಿಸ್ ಗೃಹ ಅಡ್ಡಿಯಲ್ಲಿ ಇಳಕಲ್ ನಗರದ ಪೋಲಿಸ್ ಗ್ರೌಂಡ್‌ದಲ್ಲಿ ೧೨ ಪೋಲಿಸ್ ಕ್ವಾರ್ಟಸ್ ನಿರ್ಮಾಣ ಕಾಮಗಾರಿಗೆ ಕರ್ನಾಟಕ ವೀರಶೈವ ಲಿಂಗಾಯತ
ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಡಿವಾಯ್‌ಎಸ್‌ಪಿ, ಸಿಪಿಐ ಸುನೀಲ ಸವದಿ,
ಶಹರ್ ಪೋಲಿಸ್ ಠಾಣೆಯ ಪಿಎಸ್‌ಐ ಎಸ್.ಆರ್, ನಾಯಕ್ ಹಾಗೂ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸತ್ಕರಿಸಿ ಗೌರವಿಸಿದರು.
ವರದಿ : ಭೀಮಣ್ಣ ಗಾಣಿಗೇರ