MLA Vijayananda Kashappanavara ಬಾಲಕರ ವಸತಿ ನಿಲಯಕ್ಕೆ ದಿಢೀರ ಭೇಟಿ ನೀಡಿದ ಶಾಸಕ ವಿಜಯಾನಂದ ಕಾಶಪ್ಪನವರ
ಬಾಗಲಕೋಟ : ಜಿಲ್ಲೆಯ ಇಳಕಲ್ಲದ ತಾಜ್ ಕ್ರೀಡಾಂಗಣ ಸಮೀಪ ಇರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಕ್ಕೆ ಶುಕ್ರವಾರದಂದು ಶಾಸಕ ವಿಜಯಾನಂದ ಕಾಶಪ್ಪನವರ ದಿಡೀರ್ ಭೇಟಿ ನೀಡಿ ಪರಿಶೀಲಿಸಿದರು.
ವಸತಿ ನಿಲಯದ ಅಡುಗೆ ಕೋಣೆ ಮತ್ತು ಕೊಠಡಿಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳ ಯೋಗ ಕ್ಷೇಮವನ್ನು ವಿಚಾರಿಸಿ ವಸತಿ ನಿಲಯದಲ್ಲಿ ಸಮಸ್ಯೆಗಳು ಕಂಡು ಬಂದರೆ ನನ್ನಗೆ ಮಾಹಿತಿಯನ್ನು ತಿಳಿಸಿರಿ ಎಂದು ಹೇಳಿದರು.ಮಳೆಗಾಲದಲ್ಲಿ ಮಳೆ ಹೆಚ್ಚು ಸುರಿಯುವದ್ದರಿಂದ ವಸತಿ ನಿಲಯಕ್ಕೆ ಬರುವ ದಾರಿ ಸರಿಯಾಗಿಲ್ಲ ಅದನ್ನು ಸರಿಪಡಿಸುವಂತೆ ಕೇಳಿದ ವಿದ್ಯಾರ್ಥಿಗಳಿಗೆ ಶಾಸಕರು ಮಾತನಾಡಿ ಆದಷ್ಟು ಬೇಗನೆ ರಸ್ತೆಯನ್ನು ಮಾಡಿಸಿಕೊಡುತ್ತೇನೆ ಎಂದು ಹೇಳಿದರು.
ಈ ಸಮಯದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ಕಾಂಗ್ರೆಸ್ ಮುಖಂಡ ವಿಜಯಮಹಾಂತೇಶ ಗದ್ದನಕೇರಿ, ಪ್ರವೀಣ ಹೊಳ್ಳಿ ಇದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ) ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ