ಐದು ಕೋಟಿ ವೆಚ್ಚದ ಚೆಕ್ ಡ್ಯಾಮ್ ಹಾಗೂ ಸಂರಕ್ಷಣಾ ಗೋಡೆಗೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕರು
ಇಳಕಲ್ : ಇಲ್ಲಿನ ವಿಜಯ ಮಹಾಂತೇಶ ಗದ್ದುಗೆ ಪಕ್ಕದ ಹಿರೇಹಳ್ಳಕ್ಕೆ ಐದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಚೆಕ್ ಡ್ಯಾಂ ಮತ್ತು ಸಂರಕ್ಷಣಾ ಗೋಡೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿ ಪೂಜೆ ನೆರವೇರಿಸಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ನಿರ್ಮಾಣ ಆಗುತ್ತಿರುವ ಈ ಚೆಕ್ ಡ್ಯಾಂ ಕಾಮಗಾರಿಯನ್ನು ಆದಷ್ಟು ಬೇಗನೇ ಮಾಡಬೇಕು ರಕ್ಷಣಾ ಗೋಡೆಯ ಕೆಲಸ ಸರಿಯಾಗಿ ಮಾಡಿ ಕೊಡಬೇಕು ಎಂದು ಗುತ್ತಿಗೆದಾರ ಚನ್ನನಗೌಡ ಅವರಿಗೆ ಹೇಳಿದರು.
ಈ ಸಮಯದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟೇಶ ಸಾಕಾ, ಅಂಬೇಡ್ಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶರಣಪ್ಪ ಆಮದಿಹಾಳ, ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ಅಮೃತ ಬಿಜ್ಜಳ, ಮೌಲೇಶ ಬಂಡಿವಡ್ಡರ, ರೇಷ್ಮಾ ಮಾರನಬಸರಿ, ಡಾ.ಸದಾಶಿವ ಕನಕೇರಿ, ನಾಮನಿದೇರ್ಶಿತ ಸದಸ್ಯ ಮಲ್ಲು ಮಡಿವಾಳರ, ಮುಖಂಡರಾದ ಶಬ್ಬೀರ್ ಬಾಗವಾನ, ಮಹಾಂತೇಶ ಹನಮನಾಳ ಮತ್ತಿತರರು ಉಪಸ್ಥಿತರಿದ್ದರು