
ಒಂದು ಕೋಟಿಗೂ ಹೆಚ್ಚು ಲಯನ್ಸ್ ಸದಸ್ಯರು : ಶಾಸಕ ಕಾಶಪ್ಪನವರ
ಇಳಕಲ್ : ವಿಶ್ವಾದ್ಯಂತ ಒಂದು ಕೋಟಿ ನಲ್ವತ್ತು ಸಾವಿರ ಲಯನ್ಸ್ ಸದಸ್ಯರು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಇಲ್ಲಿನ ಬಸವಾ ಪ್ಯಾಲೇಸ್ ದಲ್ಲಿ ನಡೆದ ೨೦೨೪-೨೫ ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ೪೯ ಸಾವಿರ ಲಯನ್ಸ್ ಕ್ಲಬ್ ಗಳು ಇವೆ ಇಳಕಲ್ ದಲ್ಲಿಯೂ ಕಳೆದ ಆರು ವರ್ಷಗಳಿಂದ ಲಯನ್ಸ್ ಕ್ಲಬ್ ಕಾರ್ಯ ಮಾಡುತ್ತಲಿದೆ ನಗರಸಭೆ ವ್ಯಾಪ್ತಿಯಲ್ಲಿ ಅದಕ್ಕೊಂದು ಸ್ಥಳವನ್ನು ಕೊಡಿಸುವ ವ್ಯವಸ್ಥೆ ಮಾಡಲಾಗುವದು ಎಂದು ಹೇಳಿದರು.
ಲಯನ್ಸ್ ಗವರ್ನರ್ ಬೆಳಗಾವಿಯ ರಾಜಶೇಖರ ಹಿರೇಮಠ ನೂತನ ಅಧ್ಯಕ್ಷ ಮಹಾಬಳೇಶ ಮರಟದ ಕಾರ್ಯದರ್ಶಿ ಡಾ ಮಹಾಂತೇಶ ಅಕ್ಕಿ ಕೋಶಾಧಿಕಾರಿ ಮುರಿಗೇಶ ಪಾಟೀಲ ಮತ್ತು ತಂಡಕ್ಕೆ ಪ್ರಮಾಣವಚನ ನೀಡಿ ಮಾತನಾಡಿ ಲಯನ್ಸ್ ಕ್ಲಬ್ ಇಳಕಲ್ ನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುವದಕ್ಕೆ ಇಲ್ಲಿನ ಪ್ರಗತಿಯೇ ಎದ್ದು ತೋರಿಸುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದೋಟಿಹಾಳ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಿ ಪ್ರಿಯದರ್ಶಿನಿ ಆಮದಿಹಾಳ ಮಾತನಾಡಿ ಮಹಿಳಾ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಪುಲೆ ಎದುರಿಸಿದ ಚಿತ್ರಣವನ್ನು ವಿವರಿಸಿದರು.
ನೂತನ ಪದಾಧಿಕಾರಿಗಳಿಗೆ ನಗರದ ಹಲವಾರು ಸಂಘ ಸಂಸ್ಥೆಗಳು ಗಣ್ಯ ವ್ಯಕ್ತಿಗಳು ಮಾಲಾರ್ಪಣೆ ಮಾಡಿದರು.ಅಧ್ಯಕ್ಷತೆಯನ್ನು ವಹಿಸಿದ್ದ ರಾಜಕುಮಾರ ಕಾಟವಾ ಕಳೆದ ಒಂದು ವರ್ಷದಲ್ಲಿ ಸಾಧಿಸಿದ ಸಾಧನೆಯನ್ನು ವಿವರಿಸಿದರು.
ವೇದಿಕೆಯಲ್ಲಿ ಹಿಂದಿನ ಅಧ್ಯಕ್ಷ ಡಾ ಸಂತೋಷ ಪೂಜಾರ ಉಪಸ್ಥಿತರಿದ್ದರು ಸಂಗಣ್ಣ ಗದ್ದಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಸದಸ್ಯರು ಕ್ರಿಯಾಶೀಲವಾಗಿ ಭಾಗವಹಿಸಿದ್ದರು.





