
ಮೋಟಾರ್ ಸೈಕಲ್ ಕಳ್ಳರ ಬಂಧನ : ೧೫,೦೦೦೦೦ ಅಂದಾಜು ಕಿಮ್ಮತ್ತಿನ
೨೯ ಮೋಟಾರ್ ಸೈಕಲ್ ಹಾಗೂ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ವಶ
ಬಾಗಲಕೋಟ : ಇಳಕಲ್ ಶಹರ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಬಸವೇಶ್ವರ ಸರ್ಕಲ್ ಹತ್ತಿರ ನಿಲ್ಲಿಸಿದ್ದ ಹೀರೊ ಸ್ಪೆ÷್ಲÃಂಡರ್ ಪ್ಲಸ್ ಕಂಪನಿಯ ಮೋಟಾರ್ ಸೈಕಲನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಬೈಕ್ ಮಾಲೀಕ ನೀಡಿದ ದೂರಿನ ಮೆರೆಗೆ ಶಹರ ಪೊಲೀಸ್ ಠಾಣೆ
ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಾಗ ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸದರಿಯವರಿಂದ ೧೫,೦೦೦೦೦ ಅಂದಾಜು ಕಿಮ್ಮತ್ತಿನ ೨೯ ಮೋಟಾರ ಸೈಕಲಗಳು ಮತ್ತು ಕೃತ್ಯಕ್ಕೆ ಬಳಸಿದ ಅಶೋಕ ಲೈಲ್ಯಾಂಡ್ ಗೂಡ್ಸ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಪೋಲಿಸರ ಈ ಕಾರ್ಯವನ್ನು ಬಾಗಲಕೋಟ ಜಿಲ್ಲಾ ಪೋಲಿಸ್‌ವರಿಷ್ಠಾಧಿಕಾರಿ ಅಮರನಾಥರೆಡ್ಡಿ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾಂತೇಶ ಜಿದ್ದಿ , ಹುನಗುಂದ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ವಿಶ್ವನಾಥರಾವ್ ಕುಲಕರ್ಣಿ, ಹುನಗುಂದ ಸಿಪಿಐ ಸುನೀಲ ಸವದಿ ಇವರ ಇವರಗಳ ಮಾರ್ಗದರ್ಶನದಲ್ಲಿ ಶಹರ್ ಪೋಲಿಸ್ ಠಾಣೆಯ ಪಿಎಸ್‌ಐ ಸೋಮೇಶ ಗೆಜ್ಜಿ, ಗ್ರಾಮೀಣ ಠಾಣೆಯ ಪಿಎಸ್‌ಐ ಎಮ್,ಎ,ಸತ್ತಿಗೌಡರ, ಅಪರಾಧ ವಿಭಾಗದ ಪಿಎಸ್‌ಐ ಶಕುಂತಲಾ ಬಿ ನಡುವಿನಕೇರಿ ಮತ್ತು ಸಿಬ್ಬಂದಿಯವರಾದ ಎ ಹೆಚ್ ಸುತಗುಂಡಾರ, ಆನಂದ ಗೊಲಪ್ಪನವರ, ರಜಾಕ ಎನ್ ಗುಡದಾರಿ, ಚನ್ನಪ್ಪ ಐ ಬಳಿಗೇರ, ಬಿ.ವ್ಹಿ.ಕಟಗಿ, ರವಿಕುಮಾರ ಕಂಕಣಮೇಲಿ, ಅಮರೇಶ ಗ್ಯಾರಡ್ಡಿ, ಮಹಾಂತೇಶ ಬೋಳರೆಡ್ಡಿ, ಮಂಜು ಹುನಗುಂದ, ನಬಿ ಖಾಲೆಖಾನ ಮತ್ತು ಬಾಗಲಕೋಟ ಗಣಕಯಂತ್ರ ವಿಭಾಗದ ಚಂದ್ರು ಜಟ್ಟೆಪ್ಪಗೋಳ, ಬಸು ಜಗಲಿ, ಮುತ್ತು ಬಿಸನಾಳ ಹಾಗೂ ಎಪಿಸಿಗಳಾದ ಬುಡ್ಡಾ ವಾಲಿಕಾರ, ಮಂಜು ಬಡಿಗೇರ ರವರ ತಂಡವು ಆರೋಪಿತರಿಂದ ಒಟ್ಟು ೨೯ ಮೋಟಾರ ಸೈಕಲ್‌ಗಳು ಮತ್ತು ಕೃತ್ಯಕ್ಕೆ ಬಳಸಿದ ಅಶೋಕ ಲೈಲ್ಯಾಂಡ್ ಗೂಡ್ಸ ವಾಹನ ಅಂದಾಜು ಕಿಮ್ಮತ್ತು ೧೫,೦೦೦೦೦/- ರೂಪಾಯಿಗಳ ಕಿಮ್ಮತ್ತಿನ ವಾಹನಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣಗಳನ್ನು ಭೇದಿಸಿದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣದಲ್ಲಿ ಕಾರ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಮುಕ್ತ ಕಂಠದಿAದ ಶ್ಲಾö್ಯಘಿಸಿದ್ದಾರೆ.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ





