festival ಮೊಹರಮ್ ಹಬ್ಬದ ಕೊಳ್ಳೊಳ್ಳಿಗಳ ಸಂಚಾರ
ಇಳಕಲ್ : ಜುಲೈ ೧೭ ರಂದು ನಡೆಯಲಿರುವ ಮೊಹರಮ್ ಹಬ್ಬದ ಅಂಗವಾಗಿ ನಗರದಲ್ಲಿ ಹಲವಾರು ವೇಷಧಾರಿಗಳು ವಿವಿಧ ವೇಷ ಧರಿಸಿ ಸಂಚಾರ ಮಾಡುತ್ತಿದ್ದಾರೆ.
ಹುಲಿ ವೇಷಧಾರಿಗಳ ಆಗಮನ ಇನ್ನೂ ಆಗಿಲ್ಲವಾದರೂ ಅಮವಾಸ್ಯೆ ಮರುದಿನದಿಂದಲೇ ಕೊಳ್ಳೊಳ್ಳಿಗಳ ಸಂಚಾರ ಸಾಕಷ್ಟು ಪ್ರಮಾಣದಲ್ಲಿ ಇದೆ.
ಅಂಗಡಿಗಳ ಮುಂದೆ ಮನೆಗಳ ಮುಂದೆ ಮತ್ತು ರಸ್ತೆ ರಸ್ತೆಗಳಲ್ಲಿ ಕೊಳ್ಳೊಳ್ಳಿಗಳು ಭಿಕ್ಷೆ ಬೇಡುತ್ತಾ ಅಡ್ಡಾಡುತ್ತಿದ್ದು ದುಡ್ಡು ಕೊಡವದರತ್ತ ಕೈಯಲ್ಲಿನ ಬಟ್ಟೆಯ ಹಗ್ಗದಿಂದ ಹೊಡೆಯುತ್ತಾ ಸಂಚರಿಸುತ್ತಲಿವೆ.