Murugesha Sangamಕಲಿತ ಶಾಲೆಯಲ್ಲಿಯೇ ಮುಖ್ಯಗುರುಗಳಾದ ಮುರುಗೇಶ ಸಂಗಮ್
ಇಳಕಲ್: ನಗರದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಎಜ್ಯುಕೇಶನ್ ಸೊಸೈಟಿಯ ಶ್ರೀ ವಿಜಯ ಮಹಾಂತೇಶ ಕನ್ನಡ ಮಾಧ್ಯಮ
(ಅನುದಾನಿತ) ಪ್ರಾಥಮಿಕ ಶಾಲೆಗೆ ಮುಖ್ಯಗುರುಗಳಾಗಿ ಮುರುಗೇಶ ಸಂಗಮ್ ಅವರನ್ನು ಶಾಲಾ ಆಡಳಿತ ಮಂಡಳಿ ಶನಿವಾರದಂದು ನೇಮಕ ಮಾಡಿದ್ದಾರೆ.
ಮೊದಲಿದ್ದ ಮುಖ್ಯಗುರು ದೇಸಾಯಪ್ಪ ಅಂಗಡಿ ನಿವೃತ್ತಿಗೊಂಡಿದ್ದರಿAದ ಆ ಸ್ಥಾನಕ್ಕೆ ಮುರುಗೇಶ ಸಂಗಮ್ ಅವರನ್ನು
ನೇಮಕ ಮಾಡಿ ಆದೇಶ ಪತ್ರವನ್ನು ಆಡಳಿತ ಮಂಡಳಿ ನೀಡಿ ಸತ್ಕರಿಸಿ ಗೌರವಿಸಿದರು.
ಮುರುಗೇಶ ಸಂಗಮ್ ತಮ್ಮ ಪ್ರೌಢ ಶಾಲೆಯ ಶಿಕ್ಷಣವನ್ನು ಇದೇ ಶಾಲೆಯಲ್ಲಿಯೇ ಮುಗಿಸಿ
ಇದೇ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
* ನನ್ನ ಪ್ರೌಢ ಶಿಕ್ಷಣವನ್ನು ಇದೇ ಸಿ.ಎಸ್.ವಿ.ಎಂ.ಶಾಲೆಯಲ್ಲಿಯೇ ಮುಗಿಸಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದೆ, ಈಗ ಮುಖ್ಯಗುರುಗಳಾಗಿ ಆಡಳಿತ ಮಂಡಳಿ ನೇಮಕ ಮಾಡಿರುವದು ನನಗೆ ಸಂತಸ ತಂದಿದೆ. – ಮುರುಗೇಶ ಸಂಗಮ್ ಮುಖ್ಯಗುರು ಸಿ.ಎಸ್.ವಿ.ಎಂ. ಇಳಕಲ್ಲ
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)